ಕಣ್ಣಲ್ಲೆ ಸ್ಕೆಚ್ ಹಾಕಿ, ಮನಸ್ನೆ ಮರುಳು ಮಾಡಿ,
ಉಸಿರಲ್ಲೆ ಎಂಟ್ರಿ ಹೊಡೆದು, ಪ್ರೀತಿನ್ನೆ ಬಂಡವಾಳ ಮಾಡಿ,
ಹೃದಯಾನೆ ನಿವೇಶನ ಮಾಡಿ, ಮಾತಲ್ಲೆ ಮನೆ ಕಟ್ಟಿ,
ಕನಸ್ಸಿಂದ್ಲೆ ಶೃಂಗಾರ ಮಾಡಿ, ನೆನಪಿಂದ್ಲೆ ಕಚಗುಳಿ ಇಟ್ಟು,
ದಿನವೆಲ್ಲಾ ಪೀಡಿಸಿ, ರಾತ್ರಿಯೆಲ್ಲಾ ನಿದ್ದೆ ಕೆಡ್ಸಿ,
ಜಾಣ್ಮೆಯಿಂದಲೆ ಜೀವನದ ಮೇಲೆ ವಿಲ್ಲ್ ಬರಿಸ್ಕೊಂಡು,
ಹೃದಯದ ಹೊಡೆತಕ್ಕೆ ಹೆಜ್ಜೆ ಹಾಕ್ತಿರಲ್ಲಾ....!
ನಿಮ್ಗೆ ಈ ಭೂಮಿ ಮೇಲೆ ಬೇರೆ ಜಾಗ ಸಿಕ್ಲಿಲ್ವಾ?
ರೀ, ನಮ್ಮ ಹೃದಯಾ ಏನು 30*40 ಸೈಟು ಅನ್ಕೊಂಡಿದಿರಾ?
ಈ ಜಗತ್ತು ತುಂಬಾ ಕಮರ್ಷಿಯಲ್ ಆಗೊಇತಪ್ಪಾ.
ರೀ, ಇಷ್ಟೆಲ್ಲಾ ಅದ್ಮೆಲೆ, ಇದು ಬರೀ ಇನ್ವೆಸ್ಟಮೆಂಟ ಅಂತಾ ಮಾತ್ರಾ ಹೆಳಬೇಡಿ ಅಪ್ಪಾ.
-ಕಲ್ಯಾಣ ಕುಲ್ಕರ್ಣಿ
No comments:
Post a Comment