ಕಾಳಿದಾಸನ ಕಾವ್ಯದಲ್ಲೂ ಉಪಮೆಗೆ ಸಿಗದ ಸೌಂದರ್ಯ,
ಜಕ್ಕಣ್ಣನ ಉಳಿಯಲ್ಲೂ ಅರಳದ ಆ ಅದ್ಭುತ ಮೈಮಾಟ,
ರವಿ ವರ್ಮನ ಕುಂಚದಲ್ಲೂ ಕಾಣದ ಭಾವಗಳ ಬಣ್ಣ,
ನರಸಿಂಹಸ್ವಾಮಿಯವರ ಮಲ್ಲಿಗೇಲೂ ಬೀರದ
ಸುಗಂಧ,
ಬ್ರಹ್ಮ ಬರಹದಲ್ಲೇಂದೂ ಕೇಳಿರದ ಅದೃಷ್ಟದ
ರಿಯಾಯಿತಿ,
ಊರ್ವಶಿಗೂ ಉರಿಸೊ, ರಂಭೇಗೂ ರೇಗಿಸೊ, ಫ್ಯಾನ್
ಫಾಲೊಯಿಂಗು,
ಇಷ್ಟೆಲ್ಲ ಹೋಲಿಕೆ ಇರೊ, ಶಕುಂತಲೆಯ ಈ ಶತಮಾನದ
ಸಂತತಿ
ನಿಮಗೇನದ್ರು ಸಿಕ್ರೆ ತಿಳಿಸಿ,
ಇನ್-ಫ್ಯಾಕ್ಟ, ಅವರ ಉಂಗುರ ರೆಡಿ ಇದೆ.
--
ಕಲ್ಯಾಣ ಕುಲ್ಕರ್ಣಿ
No comments:
Post a Comment