Pages

Monday, January 17, 2011

೨೦೧೧ರ ದುಬಾರಿ ಯುಗದಲ್ಲಿ ಗಾದೆ ಮಾತುಗಳನ್ನ ತೂಕಕ್ಕಿಟ್ಟಾಗ


• ಅಡಿಕೆಗೆ ಹೋದ ಮಾನ ಈರುಳ್ಳಿ ಕೊಟ್ಟ್ರು ಬಾರದು

• ತರಕಾರಿ / ದಿನಸಿ ಬೆಲೆಗಳೆ ದುಖಕ್ಕೆ ಮೂಲ ಕಾರಣ

• ಊಟಕ್ಕೆ ಮೊದಲು ಎರಡು ಲೋಟ ನೀರು

• ಬೆಳ್ಳುಳ್ಳಿ ಚಿಕ್ಕದಾದ್ರು ಬೆಲೆ ದೊಡ್ಡದು

• ಬಲ್ಲವನೆ ಬಲ್ಲ ಟೊಮ್ಯಾಟೊ ರುಚಿಯ

• ಬಡವನಿಗೇನು ಗೊತ್ತು ಕೊತ್ತಂಬರಿ ವಾಸನೆ

• ಈರುಳ್ಳಿ ತಿಂದೋನು ಸಾಲ ಮಾಡಲೇಬೇಕು

• ಹೋಟೆಲ್‌ನಲ್ಲಿ ತಿನ್ನೋನಿಗೆ ಕೋಟಿ ಕೋಟಿ ಸಾಲದು

• ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯ ರಾತ್ರಿ (ಕೊಡೆ ಬಿಟ್ಟು) ಕಾರು ತಗೊಂಡನಂತೆ

• (ಬೆಲೆಗಳನ್ನ) ಪ್ರಣವ್ ಭೂಮಿಗೆಳೆದ್ರೆ, ಪವಾರ ಆಕಾಶಕ್ಕೆ ಎಳಿತಾರೆ

• ಕೊಹಿನೂರಿಗೊಂದು ಕಾಲ ಆದ್ರೆ, ಈರುಳ್ಳಿಗೊಂದು ಕಾಲವಂತೆ

• ಭರವಸೆ ಕೊಡೊ ಸರಕಾರ, ಭರವಸೇನ ಊಲಿಸ್ಕೊಳ್ಳಲ್ವಂತೆ

• ಜೇಬು ಖಾಲಿ ಇಲ್ಲವೆ ಹೊಟ್ಟೆ ಖಾಲಿ                 
                                                                  -ಕಲ್ಯಾಣ ಕುಲ್ಕರ್ಣಿ


No comments:

Post a Comment