ಈ ಲೌಕಿಕ/ಜನರಲ್ ಟರ್ಮಸ/ವರ್ಡಸ್ ಗಳಿಗೆ ನಮ್ಮ ಕಂಪ್ಯೂಟರ್ ಭಾಷೇಲಿ
ಸಮಾನ ಅರ್ಥ ಹುಡುಕಿದಾಗ ಬರೆಯಲ್ಪಟ್ಟ ಶಬ್ದಕೋಶ ಇದು.
ದೇಹ - ಹಾರ್ಡ್ವೇರ್ / ಫಿನಿಷ್ಡ ಪ್ರೊಡಕ್ಟ ತರಹ.
ಭಾವನೆಗಳು - ಆಸ್ಸೆಂಬ್ಲಿ ಲಂಗ್ವೇಜ್ / ಪ್ರೊಗ್ರಾಮಿಂಗ್ ಕೋಡ್ ತರಹ, ಇಜಿಯಾಗಿ ಅರ್ಥ ಆಗಲ್ಲ.
ಹೃದಯ - ಭಾವನೆಗಳ ಕಂಪೈಲರ್ ತರಹ, ಎಲ್ಲವನ್ನು ಇಂಟರಪ್ರಿಟ ಮಾಡೋದು.
ಮನಸು - ಆಪರೇಟಿಂಗ್ ಸಿಸ್ಟಮ್ ತರಹ, ಎಲ್ಲ ವಿಷಯದಲ್ಲೂ ಇದರದ್ದೆ ಆಗಬೇಕು.
ಕನಸು - ಕಲರಫ಼ುಲ್ HTML ಪೇಜ್ ತರಹ, ನೋಡಕ್ಕೆ ಅಂದವಾಗಿದ್ರೂ ವರ್ಕಾಗೊ ಗ್ಯಾರಂಟಿ ಕೊಡಕ್ಕಾಗಲ್ಲ.
ನನಸು – SQL Query (ಕ್ವೇರಿ) ತರಹ, ಎಲ್ಲವನ್ನೂ ಕಷ್ಟಪಟ್ಟು ಕೇಳಿ ಪಡೀಬೇಕು.
ಬುದ್ಧಿ - ವ್ಯಾಲಿಡೇಷನ್ ಕಂಡೀಷನ್ ತರಹ, ಎಲ್ಲವನ್ನೂ ಫಿಲ್ಟರ್ ಮಾಡೋದು.
ಸ್ನೇ
ಹ - ವೆಬ್-ಸರ್ವೀಸೆಸ್ ತರಹ, ಎಲ್ಲಾ ಲಾಂಗ್ವೇಜ್-ಗೂ ಕಂಪ್ಯಾಟಿಬಲ್.
ಪ್ರೀತಿ - ಕೇಸ್ ಸೆನ್ಸಿಟಿವ್ ತರಹ, ಯಾವ ಕೇಸ್ ಬೇಕೋ ಅದೇ ಆಗಬೇಕು.
ಜೀವ - ಪವರ್/ಎಲೆಕ್ಟ್ರಿಸಿಟಿ ತರಹ, ಎಲ್ಲಕ್ಕೂ ಚಾಲನೆ ನೀಡೋದು.
ಜೀವನ - ಪ್ರಾಜೆಕ್ಟ್ ತರಹ, ಎಲ್ಲವನ್ನು ಉಪಯೋಗಿಸಿಕೊಂಡು ಸಾಗೋದು.
ಅಡೆ-ತಡೆ - ಟೆಸ್ಟಿಂಗ್ ತರಹ, ಪಾಸಾದ್ರೆ ಮಾತ್ರಾ ಜೀವನ ಸಕ್ಸೆಸ್.
ಕಷ್ಟಗಳು - ಬಗ್ಸ್-ಗಳ ತರಹ, ಇವನ್ನ ಫ಼ಿಕ್ಸ್ ಮಾಡಬೇಕು.
ಕ್ಲಾಯಿಂಟ್ - ಗಂಡ / ಹೆಂಡತಿ ತರಹ, ಅವರು ಅಕ್ಸೆಪ್ಟ್ ಮಾಡಿದಾಗ ಮಾತ್ರ ಜೀವನ (ಪ್ರಾಜೆಕ್ಟ್) ಸಾರ್ಥಕ.
ಫ಼ಾರ್ ಕಂಪ್ಲೀಟ್ ಡಿಕ್ಷನರಿ ವಿಜಿಟ್ : http://kks-newage-publications.com
No comments:
Post a Comment