ಬ್ರಹ್ಮನಿಗೆ ಬೇಡ್ಕೊಂಡು,
ತಾರೆಗಳನ್ನಾ ತಳ್ಕೊಂಡು,
ಗೃಹಗಳಿಗೆ ಗತಿ ಕಾಣ್ಸಿ,
ಶಾಸ್ತ್ರಾನೆಲ್ಲಾ ಶಾಸ್ತ್ರಿಗಳಿಗೆ ಒಪ್ಪಿಸಿ,
ಹಣೆಬರಹದ ಮೇಲೊಂದು ಹಚ್ಚೆ ಹಾಕ್ಸಿ,
ಅಂಗೈ ರೇಖೆಗಳನ್ನೆಲ್ಲ ಪಕ್ಕಕ್ಕೆ ಸರಿಸಿ,
ಅದೃಷ್ಟಕ್ಕೊಂದು ಸಲಾಮ ಹಾಕಿ,
ಹೃದಯದಲ್ಲಿ ನಿಮಗೊಸ್ಕರ
ಒಂದು ಪುಟ್ಟ ಸೂರು ಮಾಡಾಗಿದೆ,
ಒಂದು ಪುಟ್ಟ ಸೂರು ಮಾಡಾಗಿದೆ,
ಜಸ್ಟ್ ಬಲಗಾಲಿಟ್ಟು ಒಳಗೆ ಬರ್ತಿರಾ?
No comments:
Post a Comment