ದೇವರ
ಬರಹ ತಾನರಿಯದೆ ನೊಂದ ಮನವೊಂದು
ಕೇಳು
ತಿಹುದು ಪ್ರಶ್ನೆಗಳ ನೂರೊಂದು
ಹುಡುಕುತಲಿಹುದು
ಮನವು ಎಲ್ಲೆಲ್ಲು ಅವನನ್ನೆ
ಎಲ್ಲಿಹನೋ
ದೂರ ಮಾಡಿ ಕನಸುಗಳಿಂದ ನನ್ನನ್ನೆ
ಅದು
ಹೇಗೆ ದೂರಾಯಿತೊ ನನ್ನಿಂದ್ಲೆ ನನ್ನ ಮನ
ಬದುಕುವುದು
ಹೇಗೆ ಅತ್ಮದ ವಿನಃ
ನನ
ದಾರಿಯು ಕೇಳುತಲಿಹುದು ಗುರಿ ಎಲ್ಲೆಂದು
ತಿಳಿಸುವುದು
ಹೇಗೆ ಈ ಪಯಣಕ್ಕೆ ಕೊನೆ ಇಲ್ಲವೆಂದು
ಕೇಳುವರು
ಎಲ್ಲರು ನನ್ನ ಮನೆ ವಿಳಾಸ
ಪಾಪ
ಅವ್ರಿಗೇನು ಗೊತ್ತು ದಾರಿತಪ್ಪಿಹ ನನ್ನ ಆಯಾಸ
ಹೃದಯ
ಒಂದು ಕಡೆ ಆದ್ರೆ ಬಿಡಿತ ಇನ್ನೊಂದೆಡೆ
ಜಗವಿದ್ರು ಜೊತೆಯಾಗಿ ಕೊಲ್ಲೊ ಏಕಾಂತ
ಮತ್ತೊಂದೆಡೆ
ಜಾರುತಲಿಹುದು
ಭವಿಷ್ಯ ಮರುಳಿನ ಹಾಗೆ
ಅದೆಂತು
ಬಾಳುವುದೋ ಕನಸಿಲ್ಲದ ಹಾಗೆ
ಅದು
ಹೇಗೆ ಬದಲಾಗುವುದೋ ಈ ನನ್ನ ವ್ಯಥೆ
ಬರೆಯುವುದು
ಹೇಗೋ ಹೊಸದಾದ ಕಥೆ
ನಾನಾಗಿಯೆ
ಆರಿಸಿಕೋಂಡ ಜೀವನ ಇದು
ಆದ್ರೆ
ನನ್ನಿಂದಲೆ ಪದೇ ಪದೇ ಮುನಿದುಕೊಳ್ಳುವುದು
ಅದೇನು
ತಪ್ಪಾಯಿತೋ ನನ್ನಿಂದ ನಾನರಿಯೆ
ಕ್ಷಮಿಸದೆ
ಅವನು ಬದುಕುವಾ ಶಿಕ್ಷೆಕೊಡುವುದು ಸರಿಯೇ
ಹಣೆಯ
ಮೇಲೆ ಗಿಚಿದಾ ನಾಲ್ಕಕ್ಷರ
ಅದಷ್ಟೇ
ಈ ಮಾನವರ ಜೀವನ ಸಾರ
ಅಳಿಯುತಿದೆ
ಹಣೆ ಬರಹ ಕಣ್ಣೀರ ಧಾರೆಯಲಿ
ಏನಾದರೇನು
ಗೆಲ್ಲಬೇಕು ಅವನೇ ಈ ಆಟದಲಿ
ಉಸಿರಿಹುದು
ಆದ್ರೆ ನಾನೇಕೆ ಬುದುಕಿಲ್ಲ
ಮನಸ್ಸಿದೆ
ಆದ್ರೆ ಅಲ್ಲೇಕೆ ಮಿಡಿತಗಳಿಲ್ಲ
ಅದೇಕೋ
ಅವನಿಗೆ ಈ ಆಕ್ರಂದನ ಕೇಳದು
ಕಣ್ಣು
ತೆರದೇಕೆ ನೋವ ನೋಡದ ಹಾಗೆ ಮಲಗಿಹನು
-
ಕಲ್ಯಾಣ ಕುಲ್ಕರ್ಣಿ
No comments:
Post a Comment