Pages

Sunday, March 06, 2011

ಸತ್ಯಾನ್ವೇಷಣೆ (ಕೆ ಕೆ ಲೀಕ್ಸ್)




ಸತ್ಯಕ್ಕೆ ಸಾವಿಲ್ಲ ಆಂತಾರೆ, ನಿಜ,

                   ಯಾಕಂದ್ರೆ ಅದು ಯಾವಾಗಲು ಕೋಮಾ-ನಲ್ಲೆ ಇರುತ್ತೆ;

ತಾಯಿಗಿಂತ ಬಂಧುವಿಲ್ಲ ಅಂತಾರೆ, ನಿಜ,
                   ಅದು... ಅದು... ಹೆಂಡತಿ ಬರೊದಕ್ಕಿಂತಲು ಮೊದಲು ಮಾತ್ರ;

ಇರೋದು ಬರೀ ಅತ್ತೆಗೊಂದು ಕಾಲ ಮಾತ್ರ
                   ಯಾಕಂದ್ರೆ ಸೊಸೆ ಕಾಲ ಬರೋವರೆಗೆ ಅವಳೂ ಅತ್ತೆ ಆಗಿರ್ತಾಳೆ;

ಮನಸ್ಸಿನ ಹತೋಟಿ ಕಷ್ಟ ಅಂತಾರೆ, ನಿಜ,
                   ಆದ್ರೆ ಅದಕ್ಕೆ ಕಡಿವಾಣ ಹಾಕದಿದ್ರೂ ಕಷ್ಟಾನೇ;

ದೇವರು ಮನದಲ್ಲಿ ಇರ್ತಾನೆ ಅಂತಾರೆ, ನಿಜ,
                   ಅದಕ್ಕೆ ಕಲ್ಲು ದೇವರು, ಕಲ್ಲು ಹೃದಯ;


ಮನಸ್ಸಿನ ನಗ್ನತೆಗೆ ಬುಧಿಯ ಉಡುಗೆ-ತೊಡುಗೆ ಹಾಕಬೇಕು ಅಂತಾರೆ, ನಿಜ,
                   ಆಗಲೆ ಅದರ ಹುಚ್ಚಾಟ ನಿಂತು ಜೀವನಕ್ಕೊಂದು ಮೆರಗು ಕೊಡುತ್ತೆ;

ಆಸೆಯೆ ದುಃಖಕ್ಕೆ ಮೂಲ ಅಂತಾರೆ, ನಿಜ,
                   ಈ ವಿಷಯದಲ್ಲಿ ಮದುವೆ ಆಗಿರೋರೆಲ್ಲ ಙ್ನಾನೋದಯ ಪಡೆದವರೆ;

ಪ್ರೀತಿಗೆ ಸಾವಿಲ್ಲಾ ಅಂತಾರೆ, ನಿಜ,
                   ಆದ್ರೆ ಎಲ್ರೂ ಅದನ್ನ ಉಸಿರಾಡಕ್ಕೆ ಬಿಡದೆ ಕೊಲ್ಲೊ ಪ್ರಯತ್ನ ಮಾಡಿಯಾದ್ರು ಖಚಿತ ಪಡಿಸಿಕೊಳ್ಳಬೇಕು ಅನ್ನೋರೇ;

ಮನಸ್ಸಿಗೂ ಬುದ್ಧಿಗೂ ಅಜಗಜಾಂತರ ಅಂತಾರೆ, ನಿಜ,
                   ಬುದ್ಧಿ ಎಲ್ಲವನ್ನು ಸ್ವಾಧೀನ ಮಾಡಿಕೊಳ್ಳಬೇಕು ಅನ್ನುತ್ತೆ ಆದ್ರೆ ಮನಸ್ಸು ಎಲ್ಲವನು ಗೆಲ್ಲಬೇಕು ಅನ್ನುತ್ತೆ;

-- ಕಲ್ಯಾಣ ಕುಲ್ಕರ್ಣಿ

No comments:

Post a Comment