ನಿನ್ನೆಯ
ನೆನಪಲಿ ಕಣ್ಣು ಹಸಿಯಾಗಿರಲು
ಇಂದಿನ
ಬೆಳಕು ಕಣ್ಣ ಕುಕ್ಕುತಲಿಹುದು
ನಾಳೆಯ
ಕನಸುಗಳು ಪುಡಿ-ಪುಡಿಯಾಗಿರಲು
ಮುಳ್ಳ
ಜೊತೆಗೂಡಿ ದಾರಿ ತಪ್ಪಿಸುತಲಿಹವು ||
ಕಣ್ಣ
ಚಿಪ್ಪಲ್ಲಿ ಕೂಡಿಟ್ಟ ಒಂದೊಂದು ಮುತ್ತೆಲ್ಲ
ಹೃದಯ
ಕಂಪನಕೆ ಜಾರಿ ಹನಿಯಾಗಿ ಹರಿದಿಹುದು
ರೆಪ್ಪೆಯಾ
ನೆರಳಲ್ಲಿ ಕಟ್ಟಿದ ಮುದನೀಡುವ ಕನಸೆಲ್ಲ
ವಾಸ್ತವದ
ಬಿಸಿ ತಾಕಿ ತಾ ಒಣಗಿಹುದು
||
ಮನದ
ಮೂಲೆಯಲಿ ಬಚ್ಚಿಟ್ಟ ಆಸೆಗಳೆಲ್ಲ
ಬಿರಿದೆದೆಯ
ಬಡಿತದಲಿ ತಾ ನಿಃಶಬ್ದವಾಗಿಹುದು
ಮಡಿಲಲ್ಲಿ
ಕೂಡಿಟ್ಟ ಸಂತಸದ ಸಿರಿ ಎಲ್ಲ
ಹರಿದುಹೋದ
ಸೆರಗ ಅಂಚನ್ನ ಒದ್ದೆಯಾಗಿಸಿಹುದು ||
|| ನಿನ್ನೆಯ ನೆನಪಲಿ ಕಣ್ಣು ಹಸಿಯಾಗಿರಲು
ಇಂದಿನ
ಬೆಳಕು ಕಣ್ಣ ಕುಕ್ಕುತಲಿಹುದು ||
ಅಧರಗಳ
ಮೇಲೆ ಅರಳಿದ ತಾವರೆಗಳೆಲ್ಲ
ಕಣ್ಣ
ತೆರೆದೊಮ್ಮೆ ನಾ ನೋಡಲು ಮುದುಡಿಹುದು
ಓಡಲಲ್ಲಿ
ಹೊತ್ತಿದ ಭಾವಗಳ ಬೆಂಕಿ ಎಲ್ಲ
ಬತ್ತಿದ
ತನುವನ್ನೆ ಸಮಿಧೆ ತಾನಾಗಿಸಿಹುದು ||
ಕಿವಿಯಲ್ಲಿ
ಗೋಗರೆವ ಕನಸುಗಳ ಆಕ್ರಂದನವೆಲ್ಲ
ಗಾನ
ರಸವಿಲ್ಲದ ಕಂಠವನು ಶುಷ್ಕವಾಗಿಸಿಹುದು
ಕಾಲಚಕ್ರ
ತಂದಿಹ ಈ ದೈವದ ಅನಾವೃಷ್ಟಿಯನೆಲ್ಲ
ದೈವತ್ವದಿಂದಲಿ
ಚಿಗುರಿಸುವ ಹೊಣೆ ನಿನ್ನದಾಗಿಹುದು ||
ಓ
ವಸಂತ ಹೊಣೆ ನಿನ್ನದಾಗಿಹುದು
||
|| ನಿನ್ನೆಯ ನೆನಪಲಿ ಕಣ್ಣು ಹಸಿಯಾಗಿರಲು
ಇಂದಿನ ಬೆಳಕು ಕಣ್ಣ ಕುಕ್ಕುತಲಿಹುದು ||
--
ಕಲ್ಯಾಣ ಕುಲ್ಕರ್ಣಿ
No comments:
Post a Comment