ವಜ್ರದಂತಿ ಹಲ್ಲುಗಳಲ್ಲಿ ಕ್ಲೋಜ-ಅಪ್ ಸ್ಮೈಲು,
ಏಲ್-18 ನಲ್ಲಿ
ಅದ್ದಿರೊ ತುಟಿಗಳ ಮಧ್ಯ ಸೆಂಟರ್-ಫ್ರೆಶ್ ನ ಉಸಿರು,
ಸನ್ ಸಿಲ್ಕ್ ಕೇಶದಲ್ಲಿ ಲೊರಿಅಲ್ ನ ಹೊಳಪು,
ಫೇರ್ ಅಂಡ್ ಲೌಲಿ ಕಾಂತಿಗೆ ಪೌಂಡ್ಸ್ ನ
ಎಕ್ಸಟ್ರಾ ಮೆರಗು,
ವೀಟ್ ನ ವೆಲ್ವೇಟ್ ಬಾಡಿಲಿ ಎಕ್ಸ್ ನ ಪರಿಮಳ,
ರೇ-ಬನ್ ಕಣ್ಣೊಳಗೆ ಕಾಜಲ್ ನ ಅಂಚು,
ಕಿಲ್ಲರ್ ಜೀನ್ಸಲ್ಲಿ ಕೊಲ್ಲೊ ವೈಯ್ಯಾರ,
ರೀಬೊಕ್ ಶೂಜ್ ಮೇಲೆ ಮೈ ಭಾರನೆಲ್ಲಾ ಹಾಕಿ
ನಡೆದಿರೊ ಈ ಮೊಡರ್ನ್ ಮೇನಕೆ ನ ಕಂಡು
ಮನಸೂರೆಯಾಗೊದು ಸಹಜ.
ಆದ್ರೇ............ಆದ್ರೇ...........,
ಈ ಮೇಲಿನ ಲೀಸ್ಟನ ನಿಮ್ಮ ನಿರ್ಣಯ ಕನ್ಫರ್ಮ
ಮಾಡ್ಕೊಳ್ಳೊ ಮೊದ್ಲು ಇನ್ನೊಂದು
ಸಾರಿ ಓದ್ಕೊಳ್ಳೊದು ಸರಿ ಅನ್ಸುತ್ತೆ.
-- ಕಲ್ಯಾಣ
ಕುಲ್ಕರ್ಣಿ
No comments:
Post a Comment