ಗ್ರೀಷ್ಮದ ಬದುಕಿಗೆ ವರ್ಷದ ಹನಿಗರೆದೆ,
ಶರದದ ರೋಧನಕೆ ಹೆಮಂತನ ಅಪ್ಪುಗೆಯ ಆಸರೆಯಾದೆ,
ಶಿಶಿರದ ಏಕಾಂತಕೆ ವಸಂತದ ಬಳಗವಾದೆ,
ಆಸೆಗಳ ಅನಾವೃಷ್ಟಿಗೆ ಅನಂದದ ಅತಿವೃಷ್ಟಿ ಸುರಿದೆ,
ಆದೃಷ್ಟದ ಹಿಂಗಾರಿಗೆ ಭರವಸೆಯ ಮುಂಗಾರಾದೆ.
ನೀ ಯಾರೋ, ನಾ ಕಾಣೆ,
ಆದರೆ ನಿನ್ನೀ ಅವೀರತ ಅನುದಾನಕ್ಕೆ ಅನುಗಾಲ ಋಣಿಯಾದೆ.
ನೀನು ಗೆಳೆಯನೋ, ಗೆಳತಿಯೋ, ತಂದೆ-ತಾಯಿಯೋ, ದೇವರೋ,
ಯಾರದರೂ ಸರಿ, ನೀನು ಸದಾ ಕಾಲ ಚೆನ್ನಾಗಿರು
ಅಂತ ಪ್ರಾರ್ಥಿಸುವೆ.
-- ಕಲ್ಯಾಣ ಕುಲ್ಕರ್ಣಿ
No comments:
Post a Comment