Pages

Monday, April 04, 2011

ಲವ್ ಎನ್‌ಕೌಂಟರ್


ಮಂದಹಾಸದಲ್ಲೆ ಬಲೆ ಬೀಸಿ,
ನೋಟದಲ್ಲೆ ನುಗ್ಗು ಮಾಡಿ,
ಕಣ್ಣಲ್ಲೆ AK-47 ಫಿಟ್ ಮಾಡ್ಕೊಂಡು,
ಬಳುಕಲ್ಲೆ ಬಾಂಬ್ಇಟ್ಕೊಂಡು,
ನಗರದ ಸಂದಿ-ಬೀದಿಗಳಲ್ಲಿ
ಸಿಕ್ಕ-ಸಿಕ್ಕ ಹುಡುಗರ್ನೆಲ್ಲಾ
ಎನ್ಕೌಂಟರ್ ಮಾಡ್ತೀರಲ್ರಿ!

ಆದರಿಂದ ಹ್ಯಾಗೋ ಪರಾಗಿದ್ರೆ!

ಮನಸ್ಸಿಂದ್ಲೆ ಬೇಡಿ ಹಾಕಿ,
ಹೃದಯದ ಸೆರೆಮನೆಲಿ ಕೂಡಿಹಾಕಿ,
ಒಂದು ಕ್ಷಣನೂ ನೆಮ್ದಿಯಿಂದ ಇರಕ್ಕೆ ಬಿಡ್ದೆ
ಚಿತ್ರ ಹಿಂಸೆ ಕೊಟ್ಟು ಸಾಯಿಸ್ತಿರಲ್ಲಾ?


ನೀವೇನು ಆಲ್-ಕಾಯಿದಾದ ಲೇಡಿ ಕ್ಲಬ್ ನ ಲೇಡಿ ಒಸಾಮಾ ನಾ?
ಒಂದು ತಿಳ್ಕೊಳ್ಳಿ, ನಾನು ಒಬಾಮಾ ಅಲ್ಲಾ,... ಅಲ್ಲಾ.... ಅಲ್ಲಾ!



- ಕಲ್ಯಾಣ ಕುಲ್ಕರ್ಣಿ

No comments:

Post a Comment