||ನಾನೊಬ್ಬ
ಯುವ ಕವಿ
ಸಾಹಿತ್ಯದ
ಲೋಕಕ್ಕಿನ್ನೂ ಉದಯ ರವಿ||
ಸಾಹಿತ್ಯದ
ಸಾರವನೆಂದು ತಿಳಿಯುವ ದುರ್ಮಾರ್ಗಕ್ಕೆ ಕಾಲಿಟ್ಟವನಲ್ಲ
ಕವಿಗೋಷ್ಟಿಗೆ
ಹೋಗುವ ದುಃಸಾಹಸವನೆಂದೂ ಮಾಡಿದವನಲ್ಲ
ಶಬ್ದಗಳ
ಗ್ರಹಿಸಿದ್ದೇನೆ, ಅರ್ಥದ ಗೊಡವೆಗೆ
ಹೋದವನಲ್ಲ
||ನಾನೊಬ್ಬ
ಯುವ ಕವಿ||
’ರವಿಕಾಣದ್ದನ್ನ
ಕವಿ ಕಂಡ’ ಇದುವೇ ನನ್ನ ಮೊದಲ ಸಂಗ್ರಹ
ನಾ ಕಂಡು
ಕೇಳಿದ್ದನ್ನೇ ಇದರಲ್ಲಿ ಬರೆದಿದಿರುವೆ, ನನ್ನ
ಅನುಭವಕ್ಕೇನು ಕೊರತೆ ಇಲ್ಲ
ಶಾಕುಂತಲೆ
ಬರೆದ ಕಾಳಿದಾಸನೇನು ನಾನಲ್ಲ, ಆದರೂ ’ಕವಿರತ್ನ’ ಎಂಬ ಬಿರುದನ್ನು ನನ್ನಯ ನಾಮಕೆ ಸೇರಿಸಲು ಹೇಸಿದವನಲ್ಲ
||ನಾನೊಬ್ಬ
ಯುವ ಕವಿ||
ನನ್ನೀ ಬರಹದ
ಮರ್ಮವ ಅರಿತವನಲ್ಲ, ಆದರೂ ನನ್ನಯ
ಕವನಗಳಿಗೇನೂ ಬರವಿಲ್ಲ
ನನಗೀಗ ಜಗದಲಿ
ಸರಿಸಾಟಿ ಇಲ್ಲ, ಆದರೂ ನೋಬೆಲ್‌ಗೆಂದು
ಹಾತೊರೆದವನಲ್ಲ
ನನ್ನ ಬಗ್ಗೆ
ನನಗೆ ಹೆಮ್ಮೆ ಇದೆ ಅಷ್ಟೆ, ಜಂಬದ ಕೋಳಿಗೆ
ಹೋಲಿಕೆಯೇನು ನಾನಲ್ಲ
||ನಾನೊಬ್ಬ
ಯುವ ಕವಿ||
ನಾ ಬರೆದದ್ದೆಲ್ಲ
ಸಾಹಿತ್ಯದ ಏಳಿಗೆಯೇನಲ್ಲ, ಆದರೂ ಬರೆಯುವ
ತವಕ ಇನ್ನೂ ನೀಗಿಲ್ಲ
ನಾ ಬರೆದದ್ದರಲ್ಲೇನೂ
ತಪ್ಪಿಲ್ಲ,
ಇದ್ದರೂ ಒಪ್ಪುವ ಜಾಣನು ನಾನಲ್ಲ
ನಾ ಬರೆದದ್ದೆಲ್ಲ
ಸತ್ಯದ ಏಳಿಗೆಯೇನಲ್ಲ, ಆದರೂ ಆಡಂಬರದ
ಮಾತು ಇದೇನಲ್ಲ
||ನಾನೊಬ್ಬ
ಯುವ ಕವಿ||
-- ಕಲ್ಯಾಣ
ಕುಲ್ಕರ್ಣಿ
No comments:
Post a Comment