ಎರಡು ಹೊತ್ತಿಗೆ ಬಡಿದಾಡ್ತಿದ್ದ ಈ ಜೀವಕ್ಕೆ
ಮೂರು ಹೊತ್ತು ನಿಮ್ಮ ಧ್ಯಾನಾನೆ ಧಾರೆ ಎರೆದು;
ವಾಸ್ತವದಲ್ಲೇ ಬದುಕ್ತಿದ್ದ ಈ ಕಣ್ಣುಗಳಿಗೆ
ಏಷಿಯನ್ ಪೆಂಟ್ಸ್ ಬಣ್ಣದ ಕನಸುಗಳ ಕಾಣಿಕೆ
ನೀಡಿ;
ನಿಂತ ನೀರಂತಿದ್ದ ಈ ಬ್ಲಡ್ಗೆ
ಸ್ವಲ್ಪ ಪ್ರೀತಿಯ ಪ್ರೆಷ್ಷರ್ ನೀಡಿ;
ಶಬ್ದ ಮಾಲಿನ್ಯದ ನಡುವೆ ಮೌನವಾಗಿದ್ದ ಹೃದಯಕ್ಕೆ
ಮಂದಹಾಸದಲ್ಲೇ ಅಕ್ಕರೆಯ ಚೇತರಿಕೆ ನೀಡಿ;
ಹೊರೆ ಇಲ್ಲದ ಬಿಂದಾಸ ಲೈಫ಼ಗೆ
ನೆನಪುಗಳ ಮೂಟೆ ಹೊರಿಸಿ;
ರಕ್ತ ಸಂಬಂಧಗಳ ಜೊತೆ ಬದುಕು ಸವಿಸ್ತಾ ಇದ್ದ
ಈ ಸಸಿಯ ಜೊತೆ ಭಾವಗಳ ಕಸಿ ಮಾಡಿ;
ಚೆಲುವಿನ ಚಿತ್ತಾರದ ಮಾದೇಶನ ಸ್ಥಿತಿಯಲ್ಲಿ
ಬಿಟ್ಟುಹೊದ್ರೆ ಹ್ಯಾಗೇರಿ?
ಎಟ್ಲೀಸ್ಟ್ ನಿಮ್ಹಾನ್ಸನಲ್ಲಿ ಅಡ್ಮೀಟ ಆದ್ರು
ಮಾಡ್ಬಾರ್ದಾ?
- ಕಲ್ಯಾಣ ಕುಲ್ಕರ್ಣಿ
No comments:
Post a Comment