Pages

Friday, December 20, 2013

ನೋಡಿ, ಸ್ವಾಮೀ, ನಾವಿರೋದು ಹೀಗೆ...




ಮುಂದೆ ದೇಶದ ಭವಿಷ್ಯ ಇದೆ ಹುಷಾರ್...!  - ಭಾಗ -  2

ನೋಡಿ, ಸ್ವಾಮೀ, ನಾವಿರೋದು ಹೀಗೆ... 

ಅಖಂಡ ಭಾರತದ ಮಾತು ಬಂದಾಗ ನಾವೆಲ್ಲಾ ಎದೆ ತಟ್ಟಿ ಹೇಳಿಕೊಳ್ಳುವುದು, ಹಿಂದೆ ಭಾರತದ ವಿಸ್ತಾರ ಬರ್ಮಾ, ಮಲೇಷಿಯಾ ದಿಂದ  ಹಿಡಿದು, ಇಂದಿನ ಅಫ಼ಘಾನಿಸ್ತಾನ (ಗಾಂಧಾರ), ತ್ರಿವಿಷ್ಠುಪ (ಚೀನಾ ಆಕ್ರಮಿತ), ಶ್ರೀಲಂಕಾ, ಅರಬ್ ದೇಶಗಳವರೆಗೆ ಹಬ್ಬಿತ್ತು ಅಂತ ಹೇಳಿಕೊಳ್ಳುತ್ತೇವೆ. ಇದಕ್ಕೆಲ್ಲ ಮೂಲ ಕಾರಣ ಭಾರತದ ಸಂಸ್ಕೃತಿ ಎಲ್ಲಕಡೆ ಹರಡಿರುವುದು. ಒಂದು ವಿಷಯ ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೆಕಾದದ್ದು ಎಲ್ಲ ಭೂಭಾಗಗಳನ್ನ ಒಬ್ಬನೇ ಅರಸ ಆಳುತ್ತಿರಲಿಲ್ಲ, ಅಲ್ಲಿಯ ಸ್ಥಾನಿಯ ರಾಜರುಗಳೇ ಆಯಾ ಭೂಭಾಗಗಳನ್ನು ಆಳುತ್ತಿದ್ದರು. ಅವರಲ್ಲಿ ಅನೇಕರು ಒಬ್ಬ ಚಕ್ರವರ್ತಿ ಸಾಮ್ರಾಟನ ಸಾಮಂತ ರಾಜರಾಗಿರುತ್ತಿದ್ದರು. ಇಂತಹ ವಿಶಾಲ ಭರತಖಂಡ ಚೂರು-ಚುರಾಗಿ ಅದರ  3/4 ರಷ್ಟು ಭಾಗ ಮಾತ್ರ ಉಳಿದಿರುವುದಕ್ಕೆ ಬಹುಮುಖ್ಯ ಕಾರಣ   ರಾಜರುಗಳ ನಡುವಿನ ದ್ವೇಷ, ವೈಷಮ್ಯ ಮತ್ತು ದುರಾಸೆ.

ಪರಿಸ್ಥಿತಿಯನ್ನ ಅರಿತ ಹೊರಗಿನ ಆಕ್ರಮಣಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನ ಉಪಯೋಗಿಸಿಕೊಂಡರು. ಆಗಲೇ ಆರಂಭವಾಯಿತು ದೇಶದ ಕರಾಳ ಕಥನ. ಒಬ್ಬರಾದ ಮೇಲೆ ಒಬ್ಬರು ದೇಶದ ಮೇಲೆ ದಂಡೆತ್ತಿ ಬಂದರು, ಆಗರ್ಭ ಸಂಪತ್ತನ್ನು ಲೂಟಿ  ಮಾಡಿದರು, ಧರ್ಮ ಪರಿವರ್ತನೆಗಳಾದವು. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮವರೊಳಗಿನ ಕಿತ್ತಾಟ, ಏಕತೆಯ ಕೊರತೆ. ಹೊರಗಿನವರು ನಮ್ಮ ದೇಶದ ರಾಜರುಗಳಿಗೆ ಸೋಲಿಸಿದಾಗ, ನಮ್ಮವರೇ ಆದ ಇನ್ನು ಕೆಲವರು ಸಂತಸಪಟ್ಟದ್ದು, ವಿದೇಶಿಯರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿತು.

ಬ್ರಿಟೀಷರು ಇದನ್ನೇ ಬಂಡವಾಳವಾಗಿಸಿಕೊಂಡು ೨೦೦ ಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮನ್ನು ಆಳಿದರು. ಇವರ ಆಳ್ವಿಕೆಯ ಸಮಯದಲ್ಲಿ  ಬಹುತೇಕ ಜನರು ಇಂತಹ ಕಷ್ಟ, ಪಾಡು, ಅಪಮಾನವನ್ನು ತಮ್ಮ ಹಣೆಬರಹ ಎಂದುಕೊಂಡು ಸಹಿಸಿಕೊಂಡರು ಹೊರತಾಗಿ ತಿರುಗೇಳಲಿಲ್ಲ. ಸ್ವಾಭಿಮಾನದ ಕೊರತೆ ನಮಗೆ ಇಂದಿಗೂ ಮುಳುವಾಗಿದೆ. ಬ್ರಿಟೀಷರು ಹಚ್ಚಿಟ್ಟ ಕೊಳ್ಳಿ, ಭಾರತವನ್ನು ಇಂದಿಗೂ ಜಾತಿಯ, ಪ್ರಾಂತೀಯ, ಭಾಷಾವಾರು, ಹಾಗೂ ಇನ್ನಿತರ ಅನೇಕ ದಳ್ಳುರಿಗೆ ತಳ್ಳಿ ಧಗಧಗನೆ ಉರಿಯುತ್ತಿದೆ.

ಒಡೆದು ಆಳುವ ನೀತಿಯಿಂದ  ವಿದೇಶಿಯರು ನಮ್ಮ ಮೇಲೆ ಆಳ್ವಿಕೆ ನಡೆಸಿದರು ಎನ್ನುವ ಮಾತು ಸಮಸ್ಯೆಯ ಗಾಂಭೀರ್ಯತೆಯನ್ನು ಮುಚ್ಚಿಕೊಳ್ಳೋದಕ್ಕೆ ನಮಗೆ  ನಾವೇ ಹೇಳಿಕೊಂಡು ಬಂದಿರುವ  ಸುಳ್ಳು ಮಾತ್ರನಾವು ಆಗಲೇ ಹಲವು ಗುಂಪು, ರಾಜ್ಯ, ಸಂಸ್ಕೃತಿ, ಭಾಷಾವಾರು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದೆವು. ನಾವು ನಮ್ಮದೇ ಆದ ಸ್ವಾರ್ಥ ಮತ್ತು ಸ್ವಂತದ ಗುರಿಗಳಿಗೆ ಅಂಟಿಕೊಂಡಿದ್ದೆವುನಮ್ಮ ರಾಜರು ಗಳಿಗಿದ್ದ ಸೈನ್ಯ ಮತ್ತು ಅರ್ಥಿಕ ಬೆಂಬಲದ ಕೊರತೆಯನ್ನು ವಿದೇಶಿಯರು ನೀಗಿಸಿ ನಮ್ಮೊಳಗೆ ನಾವು ಕಿತ್ತಾಡುವಂತೆ ಎತ್ತಿ ಕಟ್ಟಿದರು. ಅದೇ ಸುಸಂಧಿಯೆಂದು ನಮ್ಮ ವೈರಿ ರಾಜರುಗಳ ಮೇಲೆ ಸೇಡು ತಿರಿಸಿಕೊಳ್ಳಲು ಶಕ್ತಿ  ಮೀರಿ ಹೋರಾಡಿದೆವು. ಇದರಲ್ಲಿ ಲಾಭವಾಗಿದ್ದು ಪರಕೀಯರಿಗೆ ಮಾತ್ರ. ಅವರು ನಮ್ಮ ಸ್ನೇಹಿತರಂತೆ ವರ್ತಿಸಿ ನಮ್ಮವರನ್ನು ಲೂಟಿ ಮಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಕಾಲಕ್ಕೆ  ದೇಶದಲ್ಲಿ 565 ಚಿಕ್ಕ/ದೊಡ್ಡ  ಸಂಸ್ಥಾನಗಳು ಮತ್ತು ರಾಜರುಗಳು ಅಸ್ತಿತ್ವದಲ್ಲಿದ್ದವು. ಸಂಖ್ಯೆ ನಮ್ಮ ದೆಶದಲೀರುವ ಒಟ್ಟು ೬೪೦ ಜಿಲ್ಲೆಗಳಿಗೆ ತುಂಬಾ ಹತ್ತಿರವಾಗಿದೆ. ಹಾಗೆಂದರೆ ನಾವು ಎಷ್ಟು ಒಗ್ಗಟ್ಟಿದ್ದೇವು ಅನ್ನುವದು ಯೋಚಿಸುವ ವಿಷಯ.

ನಾವು ಭಾರತೀಯರು ಒಬ್ಬೊಬ್ಬರಾಗಿ, ವಯಕ್ತಿಕವಾಗಿ ಏನಾದರು ಸಾಧಿಸ ಬಹುದೇನೋ ಆದರೆ ನಾವು ಸಂಘಟಿತರಾಗಿ ಕೆಲಸ ಮಾಡವಲ್ಲಿ ತುಂಬಾ ಹಿಂದುಳಿದಿದ್ದೇವೆ. ನಾವು ನಮ್ಮದೇ ಆದ ಸಂಘಟನೆ, ಸಮಾಜ, ಗುಂಪುಗಳಲ್ಲಿ  ಕೆಲಸ ಮಾಡುವದನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಅಹಂಕಾರ ನಮಗೆ ತಡೆಗೋಡೆಯಾಗುತ್ತದೆ. ನಾವು ಮೇಲರಿಮೆ, ಕೀಳರಿಮೆ  ಗಳ ದ್ವಂದ್ವಕ್ಕೆ ಸಿಲುಕಿ ಒದ್ದಾಡುತ್ತೇವೆ. ಇದೆಲ್ಲವೂ ಕೂಡಿ ಕಾರ್ಯಮಾಡುವ ನಮ್ಮ ಉದ್ದೇಶವನ್ನು ಹಾಳು ಮಾಡುತ್ತದೆದೇಶ, ಸಮಾಜದ ಸರ್ವತೋಮುಖ ಅಭಿವೃದ್ಧಿಯಂತಹ  ಅತಿ ಉಚ್ಚ ಉದ್ದೇಶಗಳ ವಿಶಾಲ ವೃಕ್ಷದಡಿಯಲ್ಲಿ ಆಸೆ, ಸ್ವಾರ್ಥ, ಅಹಂಭಾವದ ಬೀಜಗಳು ಮೊಳಕೆಯೊಡೆಯಲು ಆರಂಭಿಸುತ್ತವೆ. ಮುಂದೆ ಇವುಗಳು ನಮ್ಮನ್ನು ಉದ್ದೇಶ ಭ್ರಷ್ಟರನ್ನಾಗಿಸುತ್ತವೆ. ಹೀಗಿದ್ದಾಗ ನಮ್ಮದು ಅನೇಕತೆಯಲ್ಲಿ ಏಕತೆಯೋ ಅಥವಾ ಏಕತೆಯಲ್ಲಿ ಅನೆಕತೆಯೋ? ನೀವೇ ಹೇಳಿ, ಸ್ವಾಮಿ... ಕೂಡಿ ಹೋರಾಟ ಮಾಡಲು ನಮಗೆ ನಾಯಕರಿಗಿಂತ ಹೆಚ್ಚಾಗಿ ಸಂಘಟನೆಯ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಬಲ್ಲ ಸಮರ್ಥ ಕಾರ್ಯಕರ್ತರ ಅವಶ್ಯಕತೆ ಇರುತ್ತದೆ. ಇದನ್ನು ಅರಿತು ನಾವು ವರ್ತಿಸಬೆಕು. ಆಗ ಮಾತ್ರ ಸಂಘಟನೆ ಮತ್ತು ಅದರ ಉದ್ದೇಶ ಸಫ಼ಲವಾಗುವುದು.

ಇಂದು ಸಹ ದೇಶದಲ್ಲಿ ಅಂತಹದೇ ಪರಿಸ್ಥಿತಿ ಇದೆ. ಇಲ್ಲಿಯವರೆಗೆ ನಾವು ಅದೆಷ್ಟು ರಾಷ್ಟ್ರೀಯ ಸಮಸ್ಯೆಗಳಿಗೆ ಸ್ಪಂದಿಸಿ ಒಗ್ಗಟ್ಟಿನಿಂದ ಹೋರಾಟ ಮಾಡಿದ್ದೇವೆ ನೀವೇ ಹೇಳಿ. ಬೆರಳೆಣಿಕಯಷ್ಟು ಮಾತ್ರವೇ ಇರಬಹುದು. ಇಂದು ಅಂತಹದೊಂದು ಪರಿವವರ್ತನಿಯ ಸಮಯ ರಾಷ್ಟ್ರದ ಮುಂದೆ ಇದೆ. ಈಗಲಾದರೂ ನಾವೆಲ್ಲಾ ಒಗ್ಗೂಡಿ ನಮ್ಮ ಸ್ವಾರ್ಥ, ಅಹಂಕಾರ ಮತ್ತು ದುರಾಸೆಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ರಾಷ್ಟ್ರದ ನವ ನಿರ್ಮಾಣಕ್ಕೆ ಸೊಂಟಕಟ್ಟಿ ಶೃದ್ಧೆಯಿಂದ ದುಡಿಯದಿದ್ದರೆ ನಮ್ಮ ಕನಸು ಕನಸಾಗಿಯೇ ಉಳಿಯುತ್ತದೆ. ಏನಕ್ಕೂ ಯೋಚಿಸಿ ಹೆಜ್ಜೆ ಹಾಕಿ, "ಮುಂದೆ ದೇಶದ ಭವಿಷ್ಯ ಇದೆ ಹುಷಾರ್...!"


-- ಅಭಿನವ ಭಾರತ

No comments:

Post a Comment