ಕಣ್ಣ ರೆಪ್ಪೆಯ ಒಳ-ಹೊರ ಪ್ರಪಂಚಗಳ ಅಧಿಪತಿ
ನೀನು,
ಆತ್ಮದ ಇಹ-ಪರ ಲೊಕಗಳಿಗೂ ಸಂಗಾತಿ ನೀನು,
ಬೆಟ್ಟದಷ್ಟು ಆಸೆಗಳನ್ನೆಲ್ಲ ಅಂಗೈಲಿ ತಂದು
ಸುರಿದೊಳು ನೀನು,
ಬಾಳ ಇರುಳಿಗೆ ಪ್ರೀತಿಯ ಬೊಧಿವೃಕ್ಷ ನೀನು,
ರೀ ತುಂಬಾ ಭಾರನಪ್ಪಾ ನೀವು,
ಪದಗಳ ತುಲಾಭಾರ ಮಾಡಿ ಸುಸ್ತಾಗಿ ಹೊಯಿತು,
ಆದ್ರು ನಿಮ್ಮ ಸರಿ ತೂಗೊದೆಯಿಲ್ಲಾ.
-- ಕಲ್ಯಾಣ ಕುಲ್ಕರ್ಣಿ
No comments:
Post a Comment