ನಾನೂ ಬೇಕಿದ್ದರೆ ಪ್ರೇಮ ಕಾವ್ಯ ಬರೆ-ಬರೆದು ಮಜನು ಪಾಲಿನ ಕಲ್ಲುಗಳನ್ನ ಜೋಡಿಸ ಬಲ್ಲೆ,
ನಾನೂ ಬೇಕಿದ್ದರೆ ದೇವದಾಸನ ಹಾಗೆ ಕುಡಿ-ಕುಡಿದು ಲೋಟಗಳ ಪ್ರದರ್ಶನ ಮಾಡಬಲ್ಲೆ,
ಆದರೆ, ನಾನು ಬಿದ್ಹೋದ ಲಾಠಿಗೆ ಗಾಂಧೀ ತಾತನ ಕೈಗೆತ್ತಿ ಕೊಡ ಬಂದಿರುವೆ,
ನಾನೂ ಸೂಪರ್ ಮಾಮ್ ನೋಡಿ, ಸೂಪರ್ ಡ್ಯಾಡಿಯ ತಯ್ಯಾರಿ ಮಾಡಬಲ್ಲೆ,
ನಾನೂ ಇಂಡಿಯಾದ ಡ್ರಾಮೆಬಾಜನ ನಾಟಕ(ಡ್ರಾಮ)ದ ಡ್ಯಾಡಿ ಯಾಗಬಲ್ಲೆ, ಆದರೆ
ನಾನು ಜೀಜಾ ಮಾತೆಗೆ ಮತ್ತೆ ಶಿವಾಜಿಯ ಸಾಹಸದಲ್ಲಿ ತಾಯಿಯ ಪಾತ್ರ ಅರುಹ ಬಂದಿರುವೆ.
ನಾನು ನೇಣಿಗಾಗಿ ಮತ್ತೆ ಭಗತ್ ಸಿಂಹ, ರಾಜಗುರು, ಸುಖದೇವರ ಕೊರಳ ಅಳತೆ ಪಡೆಯಲು ಬಂದಿರುವೆ. - (೨)
ನಾನೂ ಸಭ್ಯತೆ ಮರ್ಯಾದೆಗಳ ಗಡಿ ದಾಟಿ ಸರ್ಕಸ್ ನಲ್ಲಿ ಕಾಮೆಡಿ ಮಾಡಬಲ್ಲೆ,
ನಾನೂ ಕೆಲವು ನರ್ಸರಿಯ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕೋಟಿ-ಕೋಟಿ ಗಳಿಸಬಲ್ಲೆ,
ಆದರೆ, ನಾನು ಜಲಿಯಾವಾಲಾ ಬಾಗನಲ್ಲಿ ಉಧಮ್ ಸಿಂಗ್ ನ ಕೈ ಹಿಡಿದು ಮತ್ತೆ ನಡೆಸ ಬಂದಿರುವೆ
ನಾನು ಕಾಕೋರಿ ಕಾಂಡದ ಬಲಿದಾನದಿಂದ ಖಾಲಿ ಆಗಿರುವ ವೀರರ ಜಾಗ ತುಂಬಲು ಬಂದಿರುವೆ. - (೩)
ನಾನೂ ಕ್ರಂಚ್ ನಲ್ಲಿ ಮೈ ಮರೆತು ನನ್ನ ಚಾರಿತ್ರ್ಯದ ವಧೆ ಮಾಡಿ ಹೆಸರ ಮಾಡಬಲ್ಲೆ,
ನಾನೂ ಭಾವುಕತೆಗೆ ಎಲ್ಲೆ ದಾಟಿ ಹರಿದ್ಹೋಗಿ ಅದಕ್ಕೆ ಅತ್ಯಾಚಾರದ ಲೇಬಲ್ ಅಂಟಿಸಬಲ್ಲೆ
ಆದರೆ, ನಾನು ಬಂಕೀಮರ ವಂದೇ ಮಾತರಂ ಹಾಡಿ ಕ್ರಾಂತಿಕಾರಿಗಳ ಬಡಿದೆಬ್ಬಿಸಲು ಬಂದಿರುವೆ.
ನಾನು ಮಲಗಿರುವ ರಾಣಾ - ಸಂಗ್ರಾಮರಿಗೆ ಮತ್ತೊಮ್ಮೆ ಪ್ರತಾಪ ಮೆರೆಯಲು ಅವ್ಹಾನಿಸ ಬಂದಿರುವೆ. - (೪)
ನಾನೂ ಬಾಸ್ ನ ಅಂಗಳದಲ್ಲಿ ರತಿಲೀಲೆಗಳನಾಡಿ ನನ್ನ ಶುಚಿತ್ವದ ವ್ಯಾಖ್ಯಾನ ಕೊಡಬಲ್ಲೆ,
ನಾನೂ ಮನೆಯಲ್ಲಿ ಹಾಡುವವರ-ಮೈ ಮರೆತು ಕುಣಿವವರ ದೊಡ್ಡದೊಂದು ಪಡೆ ಕಟ್ಟ ಬಲ್ಲೆ,
ಆದರೆ, ನಾನು ಗುರು ಗೋವಿಂದ ಹಾಗೂ ಬಂದಾ ಬೈರಾಗಿಯರಿಗೆ ಮತ್ತೆ ಬಲಿದಾನಕ್ಕೆ ಕಂಕಣ ತೊಡಿಸ ಬಂದಿರುವೆ.
ನಾನು ಕೆಚ್ಚೆದೆಯ ಬಿರುಗಾಳಿಯಂಥ ಕಲಿಗಳ ವಸ್ತ್ರಕ್ಕೆ ತ್ರಿವರ್ಣ ಧ್ವಜದ ಬಣ್ಣ ಬಳೆಯ ಬಂದಿರುವೆ. - (೫)
ನಾನೂ ದೇಶದ ಸ್ಥಿತಿಯ ಬಗ್ಗೆ ಚಿಂತಿಸಿ ಬೇರೆಯವರ ತಲೆಯ ಮೇಲೆ ಗೂಬೆ ಕೂರಿಸಬಲ್ಲೆ,
ನಾನೂ ಸಿನೆಮಾ ನೋಡಿ ಇಲ್ಲವೇ ಸೋತು ಹೋದ ಮ್ಯಾಚ್ ಮೇಲೆ ಗಂಟೆಗಟ್ಟಲೆ ಕಾಮೆಂಟರಿ
ನೀಡಬಲ್ಲೆ
ಆದರೆ, ನಾನು ಸುಭಾಷರ ಐ. ಎನ್. ಎ. ದ ವೀರರ ಜೀನ್ಸ್ ಗಳ ಪತ್ತೆ ಹಚ್ಚ
ಬಂದಿರುವೆ.
ನಾನು ನಮಗೋಸ್ಕರ ಗಡಿಯಲ್ಲಿ ನಿತ್ಯ ಮರಣ ಮೃದಂಗವಾಡುವವರ ಪ್ರಾಣಕ್ಕೆ ಪ್ರಾಣ ನೀಡ
ಬಂದಿರುವೆ. - (೬)
ಅದೆಲ್ಲ ಸರಿ, ಆದರೆ ನಾನು ನಾನೆಂದು ಗೊಣಗುವ, ಕೆಣಕುವ ನಾನ್ಯಾರು?
ನಾನು...,
ನಾನು ಅದೇ ನಿಮ್ಮ ಪ್ರತಿ ತಪ್ಪಿಗೂ ಅಡೆ-ತಡೆಯುವವನು,
ನಾನು ಅದೇ ನಿಮ್ಮ ಹಠಕ್ಕೆ ನಿಮ್ಮಲ್ಲಿ ಮೂಲೆಗುಂಪಾಗಿರುವವನು.
ನಾನು ಅದೇ ಪ್ರತಿಕ್ಷಣವೂ ನಿನ್ನ ಉನ್ನತಿಯ ಬಯಸುವವನು,
ನಾನು ಅದೇ ಸತ್ತರೂ ಸಾಯದವನು,
ನಾನು ಅದೇ ಪ್ರತಿಯೋಬ್ಬನಲ್ಲಿಯ ಆತ್ಮಾಭಿಮಾನ, ಅದೇ ಭಾರತ ಸ್ವಾಭಿಮಾನ.
-- ಅಭಿನವ ಭಾರತ
No comments:
Post a Comment