ಲಕ್ಷ ಕೋಟಿ ಹಣ ಲೂಟಿಯಿಂದ ಹೆಸರು ಮಾಡಿದ ಹಗರಣಹಳಿಗಾಗಿಯೋ?
ಹೊಟ್ಟೆಗಿಲ್ಲದೆ ಪರದಾಡುವ 85 ಕೋಟಿ ಬಡ ಜೀವಗಳಿಗಾಗಿಯೋ?
ಶೇಕಡಾ 62 ರಷ್ಟು ದೇಶದ ಕುಪೋಷಿತ ಜನರಿಗಾಗಿಯೋ?
ಅಥವಾ ಸಾಲದ ಶೂಲೆಗೆ ತಲೆಕೊಡುವ ರೈತರಿಗಾಗಿಯೋ?
ಯಾವ ಮಾತಿಗೆ ಹೆಮ್ಮೆ ಪಡೋಣ?
ತಲೆ ಕಡಿದ ನಮ್ಮ ದೇಶದ ಸೈನಿಕರ ಶವಗಳನ್ನ ಕಂಡೋ?
ಅಧಿಕಾರದಲ್ಲಿ ಕುಳಿತ ವಿಲಾಸಿ ಮೀರ್-ಜಾಫರರನ್ನು ಕಂಡೋ?
ಸ್ವಿಸ್ ಬ್ಯಾಂಕಿನಲ್ಲಿ ನಮ್ಮವರ ಖಾತೆಯ ಉಳಿತಾಯ ಕಂಡೋ?
ವಿರೋಧ ಪ್ರದರ್ಶನದಲ್ಲಿ ಲಾಠಿ ಚಾರ್ಜ್ ಮಾಡುವವರನ್ನು ಕಂಡೋ?
ಯಾವ ಮಾತಿಗೆ ಹೆಮ್ಮೆ ಪಡೋಣ?
ಶಾಸನದ ಮೇಲೆ ಸರ್ವಾಧಿಕಾರ ಸ್ಥಾಪಿಸಿದ ಕುಟುಂಬಗಳನ್ನ ಕಂಡೋ?
ಸರಕಾರದ ಒಡೆದು ಆಳುವ ನೀತಿಗಳನ್ನು ಕಂಡೋ?
ದಿನೇ-ದಿನೇ ಹೆಚ್ಚುತ್ತಿರುವ ಬಲಾತ್ಕಾರಗಳ ಸುದ್ದಿ ಕೇಳಿಯೋ?
ಇಲ್ಲಾ ಭಾರತ ವಿರೋಧಿ ಘೋಷಣೆಗಳನ್ನ ಕೇಳಿಯೋ?
ಯಾವ ಮಾತಿಗೆ ಹೆಮ್ಮೆ ಪಡೋಣ?
ಅಗ್ಗವಾಗುತ್ತಿರುವ ಊಟದ ತಟ್ಟೆಯನ್ನು ಕಂಡೋ?
ಅನ್ಯಾಯದ ಹಾಹಾಕಾರವನ್ನು ಕಂಡೋ?
ಹೆಚ್ಚುತ್ತಿರುವ ಮಾವೋವಾದ, ನಕ್ಸಲ್ ವಾದವನ್ನು ಕಂಡೋ?
ದೇಶವನ್ನು ಛಿದ್ರಗೊಳಿಸುತ್ತಿರುವ ಭಯೋತ್ಪಾದನೆಯನ್ನು ಕಂಡೋ?
ಸೈನಿಕರ ಖಾಲಿಯಾದ ಬಂದೂಕುಗಳನ್ನು ನೋಡಿಯೋ?
ಸುರಕ್ಷತೆಯಲ್ಲಾಗುತ್ತಿರುವ ತಪ್ಪುಗಳನ್ನು ನೋಡಿಯೋ?
ಅಮಾಯಕರ ಸಾವಿಗೆ ಬೆಲೆ ಕಟ್ಟಿ ಕೈತೊಳೆದುಕೊಳ್ಳುವ ನಿರ್ದಯಿಗಳನ್ನು ನೋಡಿಯೋ?
ಪೆನ್ಷನಗಾಗಿ ಪರದಾಡುವ ವೃದ್ಧರನ್ನು ನೋಡಿಯೋ?
ಯಾವ ಮಾತಿಗೆ ಹೆಮ್ಮೆ ಪಡೋಣ?
ರೈತರಿಂದ ಕೈಜಾರುತ್ತಿರುವ ಭೂಮಿಯನ್ನು ನೋಡಿಯೋ?
ಸೊಂಟದಿಂದ ಕೆಳಗೆ ಜಾರುತ್ತಿರುವ ಯುವಕರ ಜೀನ್ಸನ್ನು ನೋಡಿಯೋ?
ಸಂಸ್ಕೃತಿಯನ್ನು ತಿರಸ್ಕರಿಸುವ ಆಧುನಿಕತೆಯನ್ನು ನೋಡಿಯೋ?
ಐಪಿಎಲ್ ನ ನಾಲ್ಕು-ಆರರ ಹೊಡೆತಗಳನ್ನು ನೋಡಿಯೋ?
ಯಾವ ಮಾತಿಗೆ ಹೆಮ್ಮೆ ಪಡೋಣ?
ಒಂಬೈ ನೂರೈವತ್ತರ ಸಿಲೆಂಡರ್ ಗಾಗಿಯೋ?
ಶತ್ರುಗಳೆದುರು ಮೌನದಲ್ಲಿ ನಡೆಯುವ ಸರೆಂಡರ್ ಗಾಗಿಯೋ?
ಈ ಎಲ್ಲ ಕೈವಾಡ ಗಳಿಗೆ ಪ್ರೋತ್ಸಾಹಿಸಿದ ನಮ್ಮ ಬ್ಲಂಡರ್ ಗಾಗಿಯೋ?
ಅಥವಾ ಇಷ್ಟೆಲ್ಲಾ ಆದರೂ ಮೇರಾ ಭಾರತ ಮಹಾನ್ ಅನ್ನೋ ವಂಡರ್ ಗಾಗಿಯೋ?
ಯಾವ ಮಾತಿಗೆ ಹೆಮ್ಮೆ ಪಡೋಣ?
ನಿರಾಸೆ ಬೇಡ... ಇದೋ ಇಲ್ಲಿದೆ ಅವಕಾಶ...
ಬನ್ನಿ, ಈ ಬಾರಿ ತಪ್ಪದೆ ಮತ ಚಲಾಯಿಸೋಣ, ಬೇರೆಯವರಿಗೂ ಮರೆಯದೆ ಮತಚಲಾಯಿಸಲು ಪ್ರೆರೆಪಿಸೋಣ...
ನೆನಪಿಡಿ, ಮತ ಚಲಾವಣೆ ನಮಗೆ ಆಯ್ಕೆಯಲ್ಲ ನಮ್ಮ ಬಹುಮುಖ್ಯ ರಾಷ್ಟ್ರೀಯ ಕರ್ತವ್ಯ.
(ಮೇರಾ ಭಾರತ ಮಹಾನ್ ಥಾ, ಪರ ಅಬ ನಂಹಿ, ಮಗರ್ ಇಸೆ ವಾಪಸ್ ಮಹಾನ್ ಬನಾನಾ ಹಮ್ ಸಬ ಕಿ ಜಿಮ್ಮೆದಾರಿ ಹೈ ।)
ನಮ್ಮ ಭಾರತ ಮಹಾನ್ ಆಗಿತ್ತು ಆದರೆ ಇನ್ದಿಲ್ಲ. ಆದರೆ ಮತ್ತೆ ಇದನ್ನ ಮಹಾನ್ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೆಲಿದೆ.
-- ಅಭಿನವ ಭಾರತ
No comments:
Post a Comment