Pages

Wednesday, January 01, 2014

ಮುಂಗೇರಿಲಾಲನ ಸುಂದರ ಕನಸುಗಳು


ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...! (ಭಾಗ - 4)

ಮುಂಗೇರಿಲಾಲನ ಸುಂದರ ಕನಸುಗಳು

ಬದಲಾವಣೆಯೇ ಪ್ರಕೃತಿಯ ನಿಯಮ ಅಂತ ಹೇಳುತ್ತಾರೆ ಆದರೆ ಈ ನಿಯಮ ನಮ್ಮ ರಾಜಕೀಯ ಪಕ್ಷಗಳಿಗೆ ಮತ್ತು ಸರಕಾರದ ಯೋಜನಾ ಆಯೋಗಕ್ಕೆ ಮತ್ತು ಇತರೆ ಎಜನ್ಸಿಗಳಿಗೆ ಅನ್ವಯಿಸುವುದಿಲ್ಲ. ಇದನ್ನ ಇವರು ಬಾರಿ ಬಾರಿಗೂ ಸಿದ್ಧಪಡಿಸಿದ್ದಾರೆ. ೧೯೫೦ ರ ಆ ಆಶ್ವಾಸನೆಗಳು ಇಂದಿಗೂ ಪ್ರಚಲಿತ ಹಾಗೂ ಪ್ರಸ್ತೂತವಾಗಿವೆ. ಜಗತ್ತು ಬದಲಾಯಿತು, ದೇಶ ಬದಲಾಯಿತು, ಪೀಳಿಗೆ (ಜನರೇಶನ್) ಬದಲಾಯಿತು, ಆದರೆ ದೇಶದ ಸ್ಥಿತಿ ಬದಲಾಗಲಿಲ್ಲ, ರಾಜಕೀಯದ ಅಸಹ್ಯಕರ ಕೈವಾದಗಳು ಬದಲಾಗಲೇ ಇಲ್ಲ.

ನೀವು ಗಮನ ಹರಿಸಿದರೆ ಗೊತ್ತಾಗುತ್ತೆ ಅನೇಕ ಪಕ್ಷಗಳ ಘೋಷಣಾಪತ್ರಗಳು ಇಂದಿಗೂ ಅದೇ "ಮುಂಗೆರಿಲಾಲ್ ಕೆ ಹಸೀನ್ ಸಪನೇ" (ಮುಂಗೇರಿಲಾಲನ ಸುಂದರ ಕನಸುಗಳ) ಹಾಗೆ ಕಾಣಿಸುತ್ತವೆ. ರೋಟಿ-ಕಪಡಾ-ಮಕಾನ್ (ರೊಟ್ಟಿ-ಬಟ್ಟೆ-ಮನೆ) ನ ಭರವಸೆಗಳು. ಹಾಗಾದರೆ ದೇಶದ ಸ್ವಾತಂತ್ರ್ಯಾ ನಂತರದ 67 ವರ್ಷಗಳಲ್ಲಿ 60 ಕ್ಕೂ ಹೆಚ್ಚು ವರ್ಷ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷ ಮಾಡಿದ್ದಾದರೂ ಏನು? ಅಂತ ಕೇಳುವವರಾರು? ನೋಡಿದರೆ ಎಲ್ಲರೂ ತಮ್ಮ ಚುನಾವಣಾ ಆಶ್ವಾಸನೆಗಳನ್ನು ಇದೇ ಚುನಾವಣೆ ನಂತರ ಪೂರ್ತಿಗೊಲಿಸಲು ಕಾಯುತ್ತಿದ್ದಂತೆ ತೋರುತ್ತದೆ.

ಅದೇ ಬಡತನ ತೊಲಗಿಸಿ, ಕುಡಿಯುವ ನೀರಿನ ಪೂರೈಕೆಯ ವ್ಯವಸ್ಥೆ, ಒಳ್ಳೆ ಗಟ್ಟಿ ಮನೆಗಳ ವ್ಯವಸ್ಥೆ, ಬಡ್ಡಿ ರಹಿತ ಸಾಲ, ರೈತರಿಗೆ ಸಬ್ಸಿಡಿ, ಒಳ್ಳೆಯ ರಸ್ತೆಗಳು, ಬೆಲೆ ಏರಿಕೆಯ ಜೊತೆ   ಸೆಣಸಾಟ, ಹೀಗೆಯೇ ನೂರಾರು ಆಶ್ವಾಸನೆಗಳು. ಇಂತಹ ಆಶ್ವಾಸನೆಗಳಿಂದ ನಾವೆಂದು ಹೊರ ಬರುವೆವು? ಹತ್ತು ವರ್ಷ, ಇಪ್ಪತ್ತು ವರ್ಷ? ಸ್ವಾವಲಂಬನೆಯ ಕಡೆ ನಮ್ಮ ಸ್ವಾಭಿಮಾನಿ ಹೆಜ್ಜೆಗಳನ್ನು ಇಡುವೆವಾ? ಇಲ್ಲಾ ಇದೆ ಸಮಸ್ಯೆಗಳಲ್ಲಿ ಇನ್ನೂ ಅನಂತ ಕಾಲದವರೆಗೆ ಹೊರಳಾಡುತ್ತಿರುವೆವಾ? ಈ ಪಕ್ಷಗಳ ಜವಾಬ್ದಾರಿ ಏನಾದರು ಇದೆಯೋ ಇಲ್ಲವೋ?

ಜಗತ್ತಿನಲ್ಲಿ ಭಾರತದ ಸ್ಥಿತಿಗತಿ ಹೇಗಿದೆ ಅಂತ ತಿಳಿದಿದೆಯಾ ನಮಗೆ? ಅಸಫಲ, ಮಹತ್ವಾಕಾಂಕ್ಷಿ ರಾಜಕಾರಣಿಗಳು ಹಾಗೂ ಭ್ರಷ್ಟಾಚಾರದಿಂದ ನರಳುತ್ತಿರುವ ದೇಶ, ಇಲ್ಲಿಯ ಜನ ಸ್ವಾಭಿಮಾನ ಇಲ್ಲದವರು ಇವರನ್ನ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆಂದರೆ ಹಾಗೆ ಬಳಸಿಕೊಳ್ಳಬಹುದೆಂಬ ಅಭಿಪ್ರಾಯ ವಿದೇಶಿ ಪ್ರಭುಗಳಲ್ಲಿದೆ. ನಾವು ನಮ್ಮ ಮಾತೃಭೂಮಿಯ ಇಂತಹ ದುರ್ದಷೆಯನ್ನೇ ನೋಡಬಸುವೇವೆ?

ರಾಜಕೀಯದ ಸೂತ್ರ ಹಿಡಿದಿರುವವರಲ್ಲಿ ತುಂಬಾ ಅಧಿಕಾರ ಇರುತ್ತದೆ. ಅವರು ಮನಸ್ಸು ಮಾಡಿದ್ರೆ ದೇಶದ ದೆಸೆ ದಿಶೆಯನ್ನು ಕೆಲವೇ ವರ್ಷಗಳಲ್ಲಿ ಬದಲಿಸಬಹುದು. ನಮಗೆ ಪ್ರಗತಿಯನ್ನು ಸಾಧಿಸುವ ಬಗ್ಗೆ ತಿಳಿದಿಲ್ಲ. ಒಂದು ಸ್ವಾತಂತರ ಸರಕಾರ ಏನೆಲ್ಲ ಮಾಡುಬಹುದೆಂದು ತಿಳಿದು ಕೊಳ್ಳಲು ತುಂಬಾ ಇದೆ. ಒಂದು, ಎರಡು ರೂಪಾಯಿಗೆ ಅಕ್ಕಿ, ಗೋಧಿ ಅಥವಾ ಒಂದು ಮೊಬಾಯಿಲ್, ಅಥವಾ ಲ್ಯಾಪ್ಟಾಪ್ ಹಂಚುವುದರಿಂದ ದೇಶ ಸ್ವಾವಲಂಬಿಯಾಗುವುದೇ? ದೇಶದ ಜನರ ಜೀವನ ಮಟ್ಟ ಹೆಚ್ಚುವುದೇ? ಸ್ವತಂತ್ರ ಭಾರತದಲ್ಲಿ ಅದೆಷ್ಟು ಯೋಜನೆಗಳು ಜಾರಿಗೊಂಡಿರುವವು ಆದರೂ ಈ ದುರವಸ್ಥೆ ಮಾತ್ರ ನಮ್ಮನ್ನು ಹಿಂಬಾಲಿಸುವುದನ್ನು ನಿಲ್ಲಿಸಲಾಗಿಲ್ಲ. ಇಂತಹ ಪರಿಸ್ಥಿತಿಗಳಿಂದ ಹೊರಬರುವ ಮನಸ್ಸು ದೇಶದ ಚುಕ್ಕಾಣಿ ಹಿಡಿದಿರುವ ನಾಯಕರಿಗೆ ಇದೆಯೋ ಇಲ್ಲವೋ? ಪ್ರಗತಿಯ ಬಗ್ಗೆ ನಮ್ಮವರಿಗೆ ದೂರದೃಷ್ಟಿಯ ಆಲೋಚನೆ ಬರುವುದೆಂದು? ನಿಜವಾಗಿ ಹೇಳುವುದಾದರೆ ಅದು ಅಸಾಧ್ಯದ ಮಾತು ಅನ್ನಿಸುತ್ತದೆ. ನಮ್ಮ ಜೀವನಾವಷ್ಯಕತೆಗಳನ್ನು ಪೂರೈಸುವುದರ ಜೊತೆ-ಜೊತೆಗೆ ಪ್ರಗತಿಯ ಹಗ್ಗವನ್ನು ಹಿಡಿಯಲಾಗದೆ?

ನಾವು ಇಂದಿಗೂ ಅದೇ ಕೆಲವು ಮೂಲಭೂತ ಸಮಸ್ಯೆಗಳಾದ ಭಯೋತ್ಪಾದನೆ, ಮಾವೋವಾದ, ನಕ್ಸಲವಾದ, ಭ್ರಷ್ಟಾಚಾರ, ಅಧಿಕಾರದ ದುರುಪಯೋಗಗಳ ಮಧ್ಯ ತೊಳಲಾಡುತ್ತಿದ್ದೇವೆ. ಇನ್ನು ಮುಂದೆ ಮೂಲಭೂತ ಸೌಕರ್ಯಗಳ ಜೊತೆಗೆ ಸ್ವಾಭಿಮಾನ ಮತ್ತು ಸ್ವಾವಲಬನೆಯ ಬಗ್ಗೆ ಮಾತನಾಡುವ ಮತ್ತು ಅದಕ್ಕಾಗಿ ಈಗಾಗಲೇ ದುಡಿಯುತ್ತಿರುವವರನ್ನು ಗುರುತಿಸಿ ಅವರನ್ನು ಮುನ್ನಡೆಸಬೇಕಿದೆ. ಆಗಲೇ ನಿಶಕ್ತ ಭಾರತ ಸಶಕ್ತವಾಗುವುದು.

ಅದಕ್ಕೆ ಹೇಳೋದು, "ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...!" 


-- ಅಭಿನವ ಭಾರತ

No comments:

Post a Comment