ಮದುವೆ ಮೊದಲು:
ನಿನ್ನೊಲವೇ ನನ್ನೆದೆಯ ಮೊದಲ ಮುಂಗಾರು,
ಮದುವೆ ನಂತರ ಇದರ ಅರ್ಥ:
ಛೀ ಈ ಶೀತ ಇನ್ನೂ ಬಿಡ್ತಿಲ್ಲ ಅಂತ.
ಮದುವೆ ಮೊದಲು:
ನಿನ್ನ ಸವಿ ನುಡಿಗಳ ಪಾಕವೇ ಹೃದಯಕ್ಕೆ ಪಂಚಮೃತ,
ಮದುವೆ ನಂತರ ಇದರ ಅರ್ಥ:
ಒಂದ ಅಮೃತನೇ ಅರಗಿಸೊಕ್ಕೆ ಆಗ್ತಿಲ್ಲಾ ಅಂತೀನಿ!
ಮದುವೆ ಮೊದಲು:
ಎಂದಿಗೂ ನಂದದ ನಿನ್ನ ಕಣ್ಣ ಪ್ರೀತಿಯ ಕಂತಿಯೇ ಬಾಳ ದಾರಿಗೆ ಬೆಳಕು,
ಮದುವೆ ನಂತರ ಇದರ ಅರ್ಥ:
ಇದನ್ನು ಚಾರ್ಜ್ ಮಡ್ಬೆಕಗುತ್ತಾ? (ಹೌದ್ರೀ! ಬಂಗಾರ, ಬೆಳ್ಳಿ, ಗೀಫ್ಟಸ್, ಇತ್ಯಾದಿಗಳಿಂದ)
ಮದುವೆ ಮೊದಲು:
ನಿನ್ನೊಡನಾಟವೇ ಭಾವಗಳಿಗೆ ಕೇಳರಿಯದ ರಸದೌತಣ,
ಮದುವೆ ನಂತರ ಇದರ ಅರ್ಥ:
ಏನೋ ಖುಷಿಪಡಸಕ್ಕಂತ ಹೇಳಿದ್ರೆ...!? ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳಿ ಅಂದ್ರ?
-- ಕಲ್ಯಾಣ ಕುಲಕರ್ಣಿ
No comments:
Post a Comment