Pages

Showing posts with label ಮುಂದೆ ದೇಶದ ಭವಿಷ್ಯ ಇದೆ. Show all posts
Showing posts with label ಮುಂದೆ ದೇಶದ ಭವಿಷ್ಯ ಇದೆ. Show all posts

Wednesday, January 01, 2014

ಮುಂಗೇರಿಲಾಲನ ಸುಂದರ ಕನಸುಗಳು


ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...! (ಭಾಗ - 4)

ಮುಂಗೇರಿಲಾಲನ ಸುಂದರ ಕನಸುಗಳು

ಬದಲಾವಣೆಯೇ ಪ್ರಕೃತಿಯ ನಿಯಮ ಅಂತ ಹೇಳುತ್ತಾರೆ ಆದರೆ ಈ ನಿಯಮ ನಮ್ಮ ರಾಜಕೀಯ ಪಕ್ಷಗಳಿಗೆ ಮತ್ತು ಸರಕಾರದ ಯೋಜನಾ ಆಯೋಗಕ್ಕೆ ಮತ್ತು ಇತರೆ ಎಜನ್ಸಿಗಳಿಗೆ ಅನ್ವಯಿಸುವುದಿಲ್ಲ. ಇದನ್ನ ಇವರು ಬಾರಿ ಬಾರಿಗೂ ಸಿದ್ಧಪಡಿಸಿದ್ದಾರೆ. ೧೯೫೦ ರ ಆ ಆಶ್ವಾಸನೆಗಳು ಇಂದಿಗೂ ಪ್ರಚಲಿತ ಹಾಗೂ ಪ್ರಸ್ತೂತವಾಗಿವೆ. ಜಗತ್ತು ಬದಲಾಯಿತು, ದೇಶ ಬದಲಾಯಿತು, ಪೀಳಿಗೆ (ಜನರೇಶನ್) ಬದಲಾಯಿತು, ಆದರೆ ದೇಶದ ಸ್ಥಿತಿ ಬದಲಾಗಲಿಲ್ಲ, ರಾಜಕೀಯದ ಅಸಹ್ಯಕರ ಕೈವಾದಗಳು ಬದಲಾಗಲೇ ಇಲ್ಲ.

ನೀವು ಗಮನ ಹರಿಸಿದರೆ ಗೊತ್ತಾಗುತ್ತೆ ಅನೇಕ ಪಕ್ಷಗಳ ಘೋಷಣಾಪತ್ರಗಳು ಇಂದಿಗೂ ಅದೇ "ಮುಂಗೆರಿಲಾಲ್ ಕೆ ಹಸೀನ್ ಸಪನೇ" (ಮುಂಗೇರಿಲಾಲನ ಸುಂದರ ಕನಸುಗಳ) ಹಾಗೆ ಕಾಣಿಸುತ್ತವೆ. ರೋಟಿ-ಕಪಡಾ-ಮಕಾನ್ (ರೊಟ್ಟಿ-ಬಟ್ಟೆ-ಮನೆ) ನ ಭರವಸೆಗಳು. ಹಾಗಾದರೆ ದೇಶದ ಸ್ವಾತಂತ್ರ್ಯಾ ನಂತರದ 67 ವರ್ಷಗಳಲ್ಲಿ 60 ಕ್ಕೂ ಹೆಚ್ಚು ವರ್ಷ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷ ಮಾಡಿದ್ದಾದರೂ ಏನು? ಅಂತ ಕೇಳುವವರಾರು? ನೋಡಿದರೆ ಎಲ್ಲರೂ ತಮ್ಮ ಚುನಾವಣಾ ಆಶ್ವಾಸನೆಗಳನ್ನು ಇದೇ ಚುನಾವಣೆ ನಂತರ ಪೂರ್ತಿಗೊಲಿಸಲು ಕಾಯುತ್ತಿದ್ದಂತೆ ತೋರುತ್ತದೆ.

ಅದೇ ಬಡತನ ತೊಲಗಿಸಿ, ಕುಡಿಯುವ ನೀರಿನ ಪೂರೈಕೆಯ ವ್ಯವಸ್ಥೆ, ಒಳ್ಳೆ ಗಟ್ಟಿ ಮನೆಗಳ ವ್ಯವಸ್ಥೆ, ಬಡ್ಡಿ ರಹಿತ ಸಾಲ, ರೈತರಿಗೆ ಸಬ್ಸಿಡಿ, ಒಳ್ಳೆಯ ರಸ್ತೆಗಳು, ಬೆಲೆ ಏರಿಕೆಯ ಜೊತೆ   ಸೆಣಸಾಟ, ಹೀಗೆಯೇ ನೂರಾರು ಆಶ್ವಾಸನೆಗಳು. ಇಂತಹ ಆಶ್ವಾಸನೆಗಳಿಂದ ನಾವೆಂದು ಹೊರ ಬರುವೆವು? ಹತ್ತು ವರ್ಷ, ಇಪ್ಪತ್ತು ವರ್ಷ? ಸ್ವಾವಲಂಬನೆಯ ಕಡೆ ನಮ್ಮ ಸ್ವಾಭಿಮಾನಿ ಹೆಜ್ಜೆಗಳನ್ನು ಇಡುವೆವಾ? ಇಲ್ಲಾ ಇದೆ ಸಮಸ್ಯೆಗಳಲ್ಲಿ ಇನ್ನೂ ಅನಂತ ಕಾಲದವರೆಗೆ ಹೊರಳಾಡುತ್ತಿರುವೆವಾ? ಈ ಪಕ್ಷಗಳ ಜವಾಬ್ದಾರಿ ಏನಾದರು ಇದೆಯೋ ಇಲ್ಲವೋ?

ಜಗತ್ತಿನಲ್ಲಿ ಭಾರತದ ಸ್ಥಿತಿಗತಿ ಹೇಗಿದೆ ಅಂತ ತಿಳಿದಿದೆಯಾ ನಮಗೆ? ಅಸಫಲ, ಮಹತ್ವಾಕಾಂಕ್ಷಿ ರಾಜಕಾರಣಿಗಳು ಹಾಗೂ ಭ್ರಷ್ಟಾಚಾರದಿಂದ ನರಳುತ್ತಿರುವ ದೇಶ, ಇಲ್ಲಿಯ ಜನ ಸ್ವಾಭಿಮಾನ ಇಲ್ಲದವರು ಇವರನ್ನ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆಂದರೆ ಹಾಗೆ ಬಳಸಿಕೊಳ್ಳಬಹುದೆಂಬ ಅಭಿಪ್ರಾಯ ವಿದೇಶಿ ಪ್ರಭುಗಳಲ್ಲಿದೆ. ನಾವು ನಮ್ಮ ಮಾತೃಭೂಮಿಯ ಇಂತಹ ದುರ್ದಷೆಯನ್ನೇ ನೋಡಬಸುವೇವೆ?

ರಾಜಕೀಯದ ಸೂತ್ರ ಹಿಡಿದಿರುವವರಲ್ಲಿ ತುಂಬಾ ಅಧಿಕಾರ ಇರುತ್ತದೆ. ಅವರು ಮನಸ್ಸು ಮಾಡಿದ್ರೆ ದೇಶದ ದೆಸೆ ದಿಶೆಯನ್ನು ಕೆಲವೇ ವರ್ಷಗಳಲ್ಲಿ ಬದಲಿಸಬಹುದು. ನಮಗೆ ಪ್ರಗತಿಯನ್ನು ಸಾಧಿಸುವ ಬಗ್ಗೆ ತಿಳಿದಿಲ್ಲ. ಒಂದು ಸ್ವಾತಂತರ ಸರಕಾರ ಏನೆಲ್ಲ ಮಾಡುಬಹುದೆಂದು ತಿಳಿದು ಕೊಳ್ಳಲು ತುಂಬಾ ಇದೆ. ಒಂದು, ಎರಡು ರೂಪಾಯಿಗೆ ಅಕ್ಕಿ, ಗೋಧಿ ಅಥವಾ ಒಂದು ಮೊಬಾಯಿಲ್, ಅಥವಾ ಲ್ಯಾಪ್ಟಾಪ್ ಹಂಚುವುದರಿಂದ ದೇಶ ಸ್ವಾವಲಂಬಿಯಾಗುವುದೇ? ದೇಶದ ಜನರ ಜೀವನ ಮಟ್ಟ ಹೆಚ್ಚುವುದೇ? ಸ್ವತಂತ್ರ ಭಾರತದಲ್ಲಿ ಅದೆಷ್ಟು ಯೋಜನೆಗಳು ಜಾರಿಗೊಂಡಿರುವವು ಆದರೂ ಈ ದುರವಸ್ಥೆ ಮಾತ್ರ ನಮ್ಮನ್ನು ಹಿಂಬಾಲಿಸುವುದನ್ನು ನಿಲ್ಲಿಸಲಾಗಿಲ್ಲ. ಇಂತಹ ಪರಿಸ್ಥಿತಿಗಳಿಂದ ಹೊರಬರುವ ಮನಸ್ಸು ದೇಶದ ಚುಕ್ಕಾಣಿ ಹಿಡಿದಿರುವ ನಾಯಕರಿಗೆ ಇದೆಯೋ ಇಲ್ಲವೋ? ಪ್ರಗತಿಯ ಬಗ್ಗೆ ನಮ್ಮವರಿಗೆ ದೂರದೃಷ್ಟಿಯ ಆಲೋಚನೆ ಬರುವುದೆಂದು? ನಿಜವಾಗಿ ಹೇಳುವುದಾದರೆ ಅದು ಅಸಾಧ್ಯದ ಮಾತು ಅನ್ನಿಸುತ್ತದೆ. ನಮ್ಮ ಜೀವನಾವಷ್ಯಕತೆಗಳನ್ನು ಪೂರೈಸುವುದರ ಜೊತೆ-ಜೊತೆಗೆ ಪ್ರಗತಿಯ ಹಗ್ಗವನ್ನು ಹಿಡಿಯಲಾಗದೆ?

ನಾವು ಇಂದಿಗೂ ಅದೇ ಕೆಲವು ಮೂಲಭೂತ ಸಮಸ್ಯೆಗಳಾದ ಭಯೋತ್ಪಾದನೆ, ಮಾವೋವಾದ, ನಕ್ಸಲವಾದ, ಭ್ರಷ್ಟಾಚಾರ, ಅಧಿಕಾರದ ದುರುಪಯೋಗಗಳ ಮಧ್ಯ ತೊಳಲಾಡುತ್ತಿದ್ದೇವೆ. ಇನ್ನು ಮುಂದೆ ಮೂಲಭೂತ ಸೌಕರ್ಯಗಳ ಜೊತೆಗೆ ಸ್ವಾಭಿಮಾನ ಮತ್ತು ಸ್ವಾವಲಬನೆಯ ಬಗ್ಗೆ ಮಾತನಾಡುವ ಮತ್ತು ಅದಕ್ಕಾಗಿ ಈಗಾಗಲೇ ದುಡಿಯುತ್ತಿರುವವರನ್ನು ಗುರುತಿಸಿ ಅವರನ್ನು ಮುನ್ನಡೆಸಬೇಕಿದೆ. ಆಗಲೇ ನಿಶಕ್ತ ಭಾರತ ಸಶಕ್ತವಾಗುವುದು.

ಅದಕ್ಕೆ ಹೇಳೋದು, "ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...!" 


-- ಅಭಿನವ ಭಾರತ

2014 ರಲ್ಲಿ ಕಿಂಗ್ ನ ಚುನಾಯಿಸಿ, ಕಿಂಗ್ ಮೇಕರ್ ಗಳನ್ನಲ್ಲ...


ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...! ( ಭಾಗ - ೩)

2014 ರಲ್ಲಿ ಕಿಂಗ್ ನ ಚುನಾಯಿಸಿ, ಕಿಂಗ್ ಮೇಕರ್ ಗಳನ್ನಲ್ಲ...

ಇಂದು ದೇಶದಲ್ಲಿ ಅನೇಕ ಪ್ರಾದೆಶಿಕ ಪಕ್ಷಗಳು ತಲೆಯೆತ್ತಿವೆ. ನೋಡುವುದಕ್ಕೆ ಈ ಪಕ್ಷಗಳ ಮಧ್ಯ ವೈಚಾರಿಕ ಭಿನ್ನತೆ ಕಂಡರೂ ಇವುಗಳ ಉದ್ದೇಶ ಮಾತ್ರ ಕುರ್ಸಿ, ದುಡ್ಡು ಮತ್ತು ಅಧಿಕಾರ ಮಾತ್ರ. ಒಂದು ಕಡೆ ಪ್ರಾದೇಶಿಕವಾಗಿ ಇವುಗಳಿಂದ ಅಲ್ಪ-ಸ್ವಲ್ಪ ಅನುಕೂಲವಾದ್ರೆ ಇನ್ನೊಂದು ಕಡೆ ರಾಷ್ಟ್ರೀಯ ಮಟ್ಟದಲ್ಲಿ ಇವುಗಳಿಂದ ದೇಶದ ಪ್ರಗತಿ ಕುಂಠಿತವಾಗುತ್ತಿದೆ. ಸ್ವಾರ್ಥ ಹಾಗೂ ಪ್ರಾದೇಶಿಕ ಉದ್ದೇಶಗಳಿಗೆ ಸೀಮಿತವಾಗಿರುವ ಇವುಗಳ ಅಸ್ತಿತ್ವದಿಂದ ದೇಶ ನಲುಗಿಹೋಗಿದೆ.

ಈ ಪಕ್ಷಗಳಿಗೆ ತಾವು ಸರಕಾರ ರಚಿಸಲು ಸಾಧ್ಯವಿಲ್ಲ ಅನ್ನುವ ಸತ್ಯ ಗೊತ್ತಿದೆ. ಆದರೆ, ಆ ಪಕ್ಷಗಳಿಗೆ ಕೆಲವು ಸ್ಥಾನಗಳನ್ನು ಗಿಟ್ಟಿಸಿ ಕಿಂಗ್ ಆಗುವುದಕ್ಕಿಂತಲೂ ಕಿಂಗ್ ಮೇಕರ್ ಆಗುವುದೇ ಲಾಭಕಾರಿ ಅನ್ನುವುದನ್ನ ಅರ್ಥಮಾಡಿಕೊಂಡು ಬಿಟ್ಟಿವೆ. ಮತದಾರರ ಧೂಳುತುಂಬಿದ ಗಲ್ಲಿಗಳಿಂದ ಹೊರಟ ಇವರು ಮುಂದೆ ರಾಜಕೀಯ ವಲಯದಲ್ಲಿ ಕೆಂಪು ಬತ್ತಿಯನ್ನ ಹಾಕಿಕೊಂಡು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಮಾಡಿಸಿ ತಮ್ಮ ಕಾರಿನ ಕಿಟಕಿ ಏರಿಸಿ ತಿರುಗುತ್ತಾರೆ.

ಚುನಾವಣೆಯ ನಂತರ ಬಹುಮತದಿಂದ ವಂಚಿತವಾದ ಯಾವುದೋ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿ ಆ ಅಧಿಕಾರಾರೂಢ ಪಕ್ಷದ ತಳವನ್ನು ನೆ_ತ್ತ ಬದುಕುತ್ತವೆ, ಇಲ್ಲವೆ ದೇಶದ ಚುಕ್ಕಾಣಿಯನ್ನು ಹಿಂಭಾಗದಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸುತ್ತವೆ. ಮತ ನೀಡಿದ ಪ್ರಜೆ ಐದು ವರ್ಷಕ್ಕೆ ಇವರಾಡುವ ನಾಟಕಗಳನ್ನು ಮೂಕ ಪ್ರೇಕ್ಷಕನಾಗಿ ನೋಡುವ ಹೊರತು ಏನು ಮಾಡುವಂತಿಲ್ಲ.

ಅದೆಷ್ಟೋ ಸಾರಿ ಈ ಪಕ್ಷಗಳಿಗೆ ದೇಶದ ಮಹತ್ವದ ನೀತಿ ನಿರ್ಧಾರಗಳ ಬಗ್ಗೆ ಲವಲೇಶವು ತಿಳಿದಿರುವುದಿಲ್ಲ ಹಾಗೂ ಅವರಿಗೆ ಬೇಕಾಗಿಯೂ ಇರುವುದಿಲ್ಲ. ತಮ್ಮ ವೋಟು ಬ್ಯಾಂಕಿಗೆ ಧಕ್ಕೆ ಆಗದಿದ್ದರೆ ಸಾಕು. ಒಬ್ಬರಿಗೊಬ್ಬರು ದೇಶ ಲೂಟಿಯ ಕೈಂಕರ್ಯದಲ್ಲಿ ತೊಂದರೆಯಾಗದಂತೆ ಒಂದು ಅಲಿಖಿತ ಒಪ್ಪಂದದ (ನೀವು ನಮ್ಮ ತಂಟೆಗೆ ಬರಬೇಡಿ, ನಾವು ನಿಮ್ಮ ತಂಟೆಗೆ ಬರಲಾರೆವು ಅನ್ನು ಒಪ್ಪಂದದ) ಮೇರೆಗೆ ಕೆಲಸ ಮಾಡುತ್ತವೆ. ಅದೇ ಹಳೆಯ ಕಾಲದ ಸಾಮ್ರಾಟ ಮತ್ತು ಸಾಮಂತರ ಕಾರ್ಯವೈಖರಿ ಮುಂದು ವರೆಯುತ್ತಿದೆ.

ಇಂದಿಗೂ ದೇಶದಲ್ಲಿ ಮೀರ್ ಜಾಫರ್ ಮತ್ತು ರಾಬರ್ಟ್ರ ಕ್ಲೈವ್ಗಳ ಕೊರತೆ ಇಲ್ಲ . ಪ್ರತಿ ಐದು ವರ್ಷಕ್ಕೆ ದೇಶ ಮತ್ತೆ ಚುನಾವಣೆಯ ಪಾಣಿಪತ್ ನಲ್ಲಿ ಸೋತು ಇಬ್ಬರಲ್ಲಿ ಒಬ್ಬರ ಕೈವಶವಾಗುತ್ತಿದೆ.

ಈ ಪರಿಸ್ಥಿತಿಗಳಲ್ಲಿ ದೇಶ ಸರ್ವತೊಮುಖ ಪ್ರಗತಿ ಸಾಧಿಸುವುದು ಕಷ್ಟ ಎನ್ನುವ ವಿಷಯ ನಾವೆಲ್ಲ ಅರಿತಾಗಿದೆ. ಇದನ್ನರಿತು ಪ್ರಜ್ಞಾವಂತ ಪ್ರಜೆಗಳಾದ ನಾವು ಲೋಕಸಭೆಯ ಚುನಾವಣೆಯಲ್ಲಿ ಕೇಂದ್ರದ ವಿಷಯಗಳನ್ನು ವಿಶ್ಲೇಷಿಸಿ ರಾಷ್ಟ್ರೀಯ ಪಕ್ಷಗಳಿಗೆ ಮತ ನೀಡುವ ನಿರ್ಧಾರ ಮಾಡಬೆಕು.

ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...! ಇನ್ನು ಎಡವಿದರೆ ಏಳೋದು ಕಷ್ಟ.

-- ಅಭಿನವ ಭಾರತ

Friday, December 20, 2013

ರಾಜಕೀಯದ ಅಸ್ಪೃಶ್ಯತೆ

ಸ್ವಾತಂತ್ರ್ಯಾ ನಂತರದ ಭಾರತದ ರಾಜಕೀಯ ವ್ಯವಸ್ಥೆಯ ಪುಟಗಳನ್ನು ಒಮ್ಮೆ ಹಿಂದಿರುವಿ ನೋಡಿದಾಗ ಅಲ್ಲಿ ಅದೆಷ್ಟೋ ಪುಟಗಳು ನಮ್ಮ ಕಣ್ಣಿಗೆ ದಪ್ಪ-ದಪ್ಪ ಅಕ್ಷರಗಳಲ್ಲಿ ಮುದ್ರಿಸಿರುವುದು ಕಂಡರೂ ನಾವು ಅವುಗಳನ್ನು ಓದದೆ, ವಿಶ್ಲೇಷಿಸಿದೆ ಮುಂದುವರೆದಿರುವುದರ ಅರಿವು ನಮಗಾಗುತ್ತದೆ. ಈ ಅಲಕ್ಷವೆ ನಮ್ಮ ಇಂದಿನ ಈ ದಯನೀಯ ಸ್ಥಿತಿಗೆ ಕಾರಣವೇ? ಅಂತ ನಮಗನ್ನಿಸುತ್ತದೆ. ಹಾಗಾದರೆ ನಾವು ಎಡವಿದ್ದಾದರು ಎಲ್ಲಿ? ಮತ್ತು ನಮ್ಮ ಮುಂದಿನ ನಡಿಗೆ ಹೇಗಿರಬೇಕು? ಅನ್ನುವ ಅತಿ ಮುಖ್ಯ ಪ್ರಶ್ನೆಗಳಿಗೆ ನಾವು ಇಂದು ಉತ್ತರ ಹುಡುಕುವ ಒಂದು ಪ್ರಾಮಾಣಿಕ ಪ್ರಯತ್ನ ಮಾಡೋಣ, ಅಲ್ಲದೆ, ಇಂದಿನ ಹೊಸ ರಾಜಕೀಯದ ಕೆಲವು ಆಯಾಮಗಳನ್ನೂ ತಿಳಿದುಕೊಳ್ಳೋಣ. ಮುಂದೆ ಅಂತಹ ತಪ್ಪುಗಳು ಮರುಕಳಿಸದಂತೆ ಸಾವಧಾನವಾಗಿ ಯೋಚಿಸಿ ಮುಂದಿನ ಹೆಜ್ಜೆಗಳನ್ನ ಇಡೋಣ.



1. ರಾಜಕೀಯದ ಅಸ್ಪೃಶ್ಯತೆ 

ಸ್ವಾತಂತ್ರ್ಯ ನಂತರ ನಮ್ಮ ಪೂರ್ವಜರು (ಅಂದರೆ ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯರು) ದೇಶದ ರಾಜಕೀಯ ವ್ಯವಸ್ಥೆ ಹಾಗು ತಮ್ಮ ಮಧ್ಯ ಸದಾ ಒಂದು ಮಾರುದ್ದದಷ್ಟು (ಮೀಟರ್ ಗೇಜ್) ಅಂತರ ಕಾಪಾಡಿಕೊಂಡು ಬಂದಿದ್ದಾರೆ. ಮಡಿವಂತರಿಗೆ ಅಂತ ಇದ್ದ ರಾಜಕೀಯ ದಿನೇ-ದಿನೇ ಹದಗೆಡುತ್ತಾ ಮೈಲಿಗೆವಂತರಿಗೆ ಮಾತ್ರ ಎನ್ನುವ ಸ್ಥಿತಿಗೆ ತಲುಪಿದೆ. ಆದರೂ ಈ ಹಳಿಗಳು ಸೇರಿಕೊಳ್ಳದೆ ತಮ್ಮ ಅಂತರವನ್ನು ಕಾಪಾಡಿಕೊಂಡು ಹೊಗುತ್ತಿವೆ. ರಾಜಕೀಯ ಕೆಲವರು ನಡೆಸುವ ಕಾರುಬಾರು ಅಂತ ಜನರ ಭಾವನೆ. ಏನೂ ಅರಿಯದ ಈ ಮುಗ್ಧಜನರನ್ನು ಅದೇ ಮಾನಸಿಕ ಸ್ಥಿತಿಯಲ್ಲಿ ನಡೆಸಿಕೊಂಡು ಬರುತ್ತಿವೆ ರಾಜಕೀಯ ಪಕ್ಷಗಳು ಕೂಡ. ಆಡಳಿತ, ಸರಕಾರ ಮತ್ತು ಪ್ರಜಾಪ್ರಭುತ್ವ ಅಂದರೆ ಏನು ಅಂತ ತಿಳಿಯುವ ಉಸಾಬರಿಗೆ ನಮ್ಮವರು ಹೋಗಿಲ್ಲ. ಕೇಳಿದರೆ ಕೆಲವರು ಸಂವಿಧಾನವನ್ನೇ ತಮ್ಮ ತಮ್ಮ ರೀತಿಯಲ್ಲಿ ವ್ಯಾಖನಿಸುತ್ತಾರೆ, ಆದರೆ, ಬೆರೆಯುವ, ಒಗ್ಗೂಡಿ ನಡೆಸುವ ರಾಜಕೀಯ ಮಾತ್ರ ನಮ್ಮವರಿಗೆ ಅರ್ಥವಾಗದಿರೋದು ವಿಪರ್ಯಾಸದ ಸಂಗತಿ. ಸರಕಾರ, ಒಳ್ಳೆಯ ಆಡಳಿತ ವ್ಯವಸ್ಥೆಯಿಂದ ಏನಾಗಬಹುದು, ದೇಶದ ಸ್ಥಿತಿ ಹೇಗೆ ಬದಲಾಗಬಹುದು, ದೇಶದ ಪ್ರಗತಿಯ ಪ್ರಬಲ ಇಚ್ಚಾಶಕ್ತಿಯ ಸರಕಾರ ಹೇಗೆ ದೇಶದ ಅವಸ್ಥೆ, ವ್ಯವಸ್ಥೆ ಬದಲಾಯಿಸಬಹುದು ಹಾಗೂ ಹೇಗೆ ಜನರ ಜೀವನ ಸ್ತರವನ್ನ ಹೆಚ್ಚಿಸಬಹುದು ಅನ್ನುವ ವಿಚಾರವೇ ನಮಗೆಲ್ಲ ತಿಳಿಯದಂತಾಗಿದೆ. ದೇಶಕ್ಕೆ, ಸಮಾಜಕ್ಕೆ ನಮಗಿರುವ ಜವಾಬ್ದಾರಿಯನ್ನು ಅರಿಯದೆ ದೇವರನ್ನೋ, ಹನೆಬರಹವನ್ನೋ ಹಲುಬಿ ತಮ್ಮ ತಮ್ಮ ಕೌಟುಂಬಕ್ಕೆ ಚೌಕಟ್ಟು ಹಾಕಿಕೊಂಡು ಜೀವನ ಸವಿಸೋದೆ ದೊಡ್ಡದು ಅನ್ನಿಸಿ ಬಿಟ್ಟಿದೆ. ಅಂಗೈ ಬೆಣ್ಣೆಗೆ ಕನ್ನಡಿ ಸಿಗಲಿಲ್ಲ, ಬೆಣ್ಣೆನ ಎಲ್ಲಿ ಹುಡುಕೋದು ಅಂತ ನುಣುಚಿಕೊಳ್ಳೋದೇ ಆಯಿತು.

ಇನ್ನು ಕೆಲವರು (ಮುಖ್ಯವಾಗಿ ನಾಯಕರು) ಸ್ವಾತಂತ್ರ್ಯ ಅಂದರೆ ಸ್ವೇಚ್ಛಾಚಾರ ಅಂದುಕೊಂಡಿದ್ದಾರೆ, ಇದು ಬದಲಾಗ ಬೇಕು. ಈ ರಾಷ್ಟ್ರದ ಹೊಸ ಚಿಗುರಿಗೆ ಪ್ರಜೆ ಮತ್ತು ಪ್ರಭುತ್ವ ಈ ಎರಡು ನೀರು, ಗೊಬ್ಬರ ಮತ್ತು ಸೂರ್ಯ ರಷ್ಮಿಯಾಗಬೇಕು. ಆಗ ಶತಮಾನಗಳ ವರೆಗೆ ಈ ವಸಂತ ಶಾಶ್ವತ್ತವಾಗುತ್ತದೆ. ಇದೇನು ಮಹಾ ಅಂತ ಅಡ್ಡಾದಿಡ್ಡಿ ನಡೆಯಬೇಡಿ, ಮುಂದೆ ದೇಶದ ಭವಿಷ್ಯ ಇದೆ, ಹುಷಾರ್...!

-- ಅಭಿನವ ಭಾರತ