Pages

Saturday, March 19, 2011

ವಾಸ್ತವ



ಅಡ್ಜಸ್ಟಮೆಂಟ್ ಚೌಕಟ್ಟಲ್ಲಿರೊ ಸುಖ
ಆಡಂಬರದ ಅಂಬರದಲ್ಲಿ ದೊರಕಲ್ಲ
ಯಾಕೆ ಗೊತ್ತಾ?
ಮನಸುಗಳ ಮಧ್ಯ ಅಂತರ ಹೆಚ್ಚುತ್ತೆ.

ಪ್ರೀತಿಯ ಜೊಪಡಿಲಿ ಇರೊ ಹೃದಯದ ಶ್ರೀಮಂತಿಕೆ
ಅದೃಷ್ಟದ ಅರಮನೆಲಿ ಇರೊಲ್ಲಾ.
ಯಾಕೆ ಗೊತ್ತಾ?
ಹೃದಯಳ ಮಧ್ಯ ವ್ಯವಹಾರ ಶುರು ಆಗುತ್ತೆ.

ಜೀವನದ ಎರಿಳಿತಗಳಲ್ಲಿ ಇರೊ ಸಂಗೀತನ
ಅಂಗಡಿಲಿ ಕೊಂಡುಕೊಂಡು ಅನುಭವಿಸಕ್ಕಾಗಲ್ಲಾ.
ಯಾಕೆ ಗೊತ್ತಾ?
ಏಳು-ಬೀಳಿರದ ಜೀವನರಾಗಾ ಬೇಗ ಬೊರ್ ಹೊಡಿಸುತ್ತೆ.

ತಿರುಕನ ತಟ್ಟೆಲಿ ಇರೊ ಬಿಕ್ಷೆಯ ಸ್ವಾದ
ತಿಂದುತೇಗೊರ ಮೃಷ್ಟಾನ್ನದಲ್ಲಿ ಇರೊಲ್ಲ.
ಯಾಕೆ ಗೊತ್ತಾ?
ಇಲ್ಲಿ ಪಾಕಗಳು ಮುಖ್ಯ ಅಲ್ಲ, ಹಸಿವು ಮುಖ್ಯ.

                                   -- ಕಲ್ಯಾಣ ಕುಲ್ಕರ್ಣಿ

No comments:

Post a Comment