ಜೀವನದ ಖುಷಿ ಎಲ್ಲಾ ಶ್ರಾವಣದ ಬಿಸಿಲಾಗಿ ಹೋಯಿತು,
ಕನಸಿನ ಗೊಪುರ ಎಲ್ಲಾ ಆಷಾಢದ ಗಾಳಿಗೆ ತೂರಿ ಹೋಯಿತು,
ಮನಸ್ಸಿನ ತೇವವೆಲ್ಲಾ ವೈಶಾಖದ ಶಾಖಕ್ಕೆ
ಒಣಗಿ ಹೋಯಿತು,
ಹೃದಯದ ಭಾವಗಳೆಲ್ಲಾ ಹೆಮಂತನ ಶೀತಕ್ಕೆ ಹೆಪ್ಪುಗಟ್ಟಿ ಹೋಯಿತು,
ಇನ್ನುಳಿದ ಕಾಲವೆಲ್ಲಾ ಜೀವನದ ಶಾಕ್ ಗಳಿಂದ
ಸುಧಾರಿಸೊದ್ರಲ್ಲಿ ಕಳೆದು
ಹೋಯಿತು.
.
ಕೊನೆಗೆ ಭೂಮಿಮೇಲೆ ಬದುಕು ಸಾಕಾಗಿ,
ಅರ್ಜೆಂಟಾಗಿ ಯಮನಿಗೆ ಪತ್ರ ಬರೆದು ಕರೆಸಿ
ಸೆಲ್ಫ್ ಸರೆಂಡರ್ ಆಗೋಣ ಅಂದ್ರೆ,
ನನ್ ಮಗನ್ದು,
ನಾನು ಯಾವಾಗ್ಲೋ ಒಂದಜ್ಜಿಗೆ ರೋಡ್ ದಾಟಿಸಿದ್ದು
ಆ ಬ್ರಹ್ಮನಿಗೆ ಫ಼್ಲ್ಯಾಷಾಗಿ ನನ್ನನ್ನ ಬಚಾವ್ ಮಾಡಿ ಬಿಡೊದಾ?
ಜೀವನದಲ್ಲಿ ಮಾಡಿದ ಒಂದೇ ಒಂದು ಪುಣ್ಯದ
ಕೆಲ್ಸಾನು ಈ ರೀತಿ ಕೈ ಕೊಟ್ತು.
--
ಕಲ್ಯಾಣ ಕುಲ್ಕರ್ಣಿ
No comments:
Post a Comment