Pages

Friday, January 28, 2011

ಪ್ರೇಮ ಪೂಜೆ


ಮನದಾಳದ ಕಡಲ ಆಲೆಯೆಲ್ಲ ಭಾವಗಳ ರೂಪ ತಳೆದು ಉಕ್ಕಿ ಉಕ್ಕಿ ಹೃದಯ ಗರ್ಭದಲ್ಲಿ ಕೊರೆದ ಅವಳ ಮೂರ್ತಿಗೆ ಅಭಿಶೇಕವ ಮಾಡಿರಲು,

ತುಟಿಯಂಚಲ್ಲಿ ನಲಿದಾಡಿದ, ನಾಲಿಗೆಯಲಿ ಹೊರಳಾಡಿದ, ಕಂಗಳಲಿ ಮನೆಮಾಡಿದ, ಮುಖ ಪಟಲದಲ್ಲಿ ಕುಣಿದಾಡಿದ ಮತುಗಳೆಲ್ಲ ಮಂತ್ರ ಘೊಶಗಳಗಿರಲು,

ಹೃದಯದ ಮೃದಂಗ, ಉಸಿರಿನ ವೀಣೆ, ಅಂತರಾಳದ ಕೂಗೆ ಶಂಖ ವಾದ್ಯ, ದೇಹದ ಕಣ-ಕಣದ ನರ್ತನವೇ ಜಾಗಟೆಯ ಶಬ್ದವಾಗಿ ಏಕ ತಾನದಲ್ಲಿ ಮೊಳಗಿರಲು,

ಅವಳ ನೆನಪಲ್ಲಿ ಅರಳಿದ ಈ ಮೊಗವೇ ಪುಷ್ಪವಾಗಿ, ಅವಳ ಸನಿಹದಲ್ಲಿ ಘಮ ಘಮಿಸುವ ಈ ಮನವೇ ಗಂಧವಾಗಿರಲು,

ಅವಳ ಛಾಯೆಯಿಂದ ಕಣ್ಣಲ್ಲಿ ಮಿಂಚಿದ ಬೆಳಕೇ ದೀಪ, ಅವಳ ಉಸಿರ ಗಾಳಿಯೇ ಧೂಪ,

ಅವಳ ನಾಮದ ಕನವರಿಕೆಯೆ ಜಪ, ಅವಳ ಸಾನಿಧ್ಯವೇ ಜೀವನ ತಪ, ಕ್ಷಣ-ಕ್ಷಣವು ಅವಳ ಅನುಭೂತಿಯಲ್ಲಿ ಹೊರಳಾಡುವ ಮನ ಸ್ಥಿತಿಯೇ ಧ್ಯಾನವಾಗಿರಲು,

ಅವಳ ವೈಖರಿಯ ವರ್ಣನೆಯೇ ಸಂಕೀರ್ತನೆ, ಚಿತ್ತದಲ್ಲಿ ಅವಳ ಚಿತ್ರವ ಚಿಮ್ಮಿಸುವ ಪ್ರತಿ ಪಂಕ್ತಿಯೇ ಭಜನೆಯಾಗಿರಲು,



ಜೀವನ ಸಾಕ್ಷಾತ್ಕಾರದ ಈ ಪ್ರೀತಿ ಪ್ರತಿದಿನದ ಪೂಜೆಯೇ ಅಲ್ಲವೆ?

ಈ ಪೂಜೆ ಸ್ವೀಕರಿಸೊ ಆ ಹೃದಯ ದೇವರೆ ಅಲ್ಲವೆ?



                                                                                               -ಕಲ್ಯಾಣ ಕುಲ್ಕರ್ಣಿ

No comments:

Post a Comment