ಅಂದ ಹಾಗೆ ನನಗೆ ಆಗಾಗ ಒಂದು ಪ್ರಶ್ನೆ ಕಾಡ್ತಾ ಇರುತ್ತೆ, ಅದೇನೆಂದ್ರೆ "ಇದು ಯಾವ ಯುಗ?" ಅನ್ನೋದು. ಇದಕ್ಕೆ ಉತ್ತರ ಹುಡುಕ್ತಾ ಹೋದಾಗ ಈ ಯುಗ ನನಗೆ ಅದೆಷ್ಟೋ ರೀತಿಯಲ್ಲಿ ಕಂಡು ಬಂತು. ಆದ್ರೆ ಅದರಲ್ಲಿ ಅತಿಯಾಗಿ ಸೂಕ್ತ ವಾದವು ಮತ್ತು ವಾಸ್ತವ ವಾದವುಗಳನ್ನ ಪಟ್ಟಿ ಮಾಡಿ ಅವನ್ನ ಈ ಲೇಖನದಲ್ಲಿ ನಿಮ್ಮ ಜೊತೆ ಚರ್ಚೆ ಮಾಡ್ತಾ ಇದಿನಿ.
ನಮ್ಮ ಭಾರತೀಯ ಕಾಲ ಖಂಡದ ವಿಂಗಡಣೆಯ ಪ್ರಕಾರ, ಸತ್ಯ, ನ್ಯಾಯ ಹಾಗು ಅತ್ಯುಚ್ಚ ನಡತೆಗಳನ್ನ ಜೀವನಾದರ್ಶವಾಗಿಟ್ಟು ಕೊಂಡ ಆ ರಾಮನ ಆದರ್ಶ ಯುಗ (ತ್ರೇತಾ ಯುಗ) ಒಂದಿತ್ತಂತೆ. ನಂತರ ಆದರ್ಶಗಳು ಅದಃಪತನಕ್ಕಿಳಿದಾಗ ಬಂದದ್ದು ಆ ಆದರ್ಶ ಹಾಗು ನಡಾವಳಿಗಳನ್ನೆಲ್ಲ ಧರ್ಮಕ್ಕೆ ರೂಪಾಂತರಿಸಿ ಪರಿಪಾಲಿಸೋ ರೀತಿಗೆ ನಾಂದಿ ಹಾಡಿದ ಆ ಶ್ರೀಕೃಷ್ಣನ ಧರ್ಮ ಯುಗ (ದ್ವಾಪರ ಯುಗ) ವಂತೆ. ಸಮಾಜ ಅದಕ್ಕೂ ಹೆದರದೇ ಧರ್ಮಾಚರಣೆಗಳನ್ನ ಗಾಳಿಗೆ ತೂರಿದಾಗ ಹುಟ್ಟಿದ್ದು ಕಲಿಯುಗ. ಅಂದ್ರೆ ತ್ರೇತಾ ಯುಗದ ಆದರ್ಶಗಳಿಂದ, ದ್ವಾಪರದ ಧರ್ಮಾಚರಣೆಗಳಿಂದ ಎಷ್ಟು ಸಾಧ್ಯವೋ ಅಷ್ಟು ಅರಿತು, ಕಲಿತು, ತಿಳಿದು ಜೀವನ ಸಾಗಿಸೋ ಯುಗ ಅಂತ ನಮ್ಮಜ್ಜಿ ಹೇಳ್ತಾ ಇದ್ರು.
ನಾವೆಲ್ಲಾ ಈಗಿರೋದನ್ನ ಕಲಿಯುಗವೇ ಅನ್ಕೊಂಡಿದ್ದಿವಿ. ಆದ್ರೆ ನನ್ನ ಪ್ರಕಾರ ಇದು ಅದಕ್ಕಿಂತ ಸ್ವಲ್ಪ ವಿಭಿನ್ನ. ಇದು ಕೇಳಿದ್ದನ್ನ, ಅರಿತದ್ದನ್ನ ಅಥವಾ ಕಲಿತದ್ದನ್ನ ತಮ್ಮ ವಿವೇಚನೆಗೆ ಮೀರಿ ಚಿಂತಿಸಿ ಬೇರೆಯವರಿಗೆ ಉಪದೇಶ ನೀಡುವ ಕಾಲ. ಇಂದು ನೀವು ಯಾವುದೇ ವಿಷಯ ತಗೊಳ್ಳಿ ಜನ ಅದರ ಬಗ್ಗೆ ವಿವೇಚನಾತ್ಮಕವಾಗಿ ಮಾತಾಡ್ತಾರೆ. ಅದನ್ನ ಎಲ್ಲರೂ ಬದುಕೊ ಶೈಲಿ ಮಾಡ್ಕೊಂಡಿದಾರೆ. ಸ್ವತಃ ಪಾಲಿಸದಿದ್ದರೂ ಸರಿ, ಆದ್ರೆ ತಾವು ಎಲ್ಲವನ್ನೂ ಬಲ್ಲ ತ್ರಿಕಾಲಿಗಾಳು ಅಂತ ಬೀಗುವವರ "ಉಪದೇಶ ಯುಗ" ಅಂತ ನನಗೆ ಎಷ್ಟೋಂದು ಬಾರಿ ಅನ್ಸುತ್ತೆ.
ಇನ್ನು ವೈಙ್ನಾನಿಕವಾಗಿ ಹೇಳೋದಾದ್ರೆ, ಅತ್ಯಂತ ಪ್ರಾಚೀನವಾದದ್ದು ಶಿಲೆಗಳನ್ನ ಬಳಸ್ತಾ ಇದ್ದ ಶಿಲಾಯುಗ, ಆಮೇಲೆ ಬಂದದ್ದು ಕಂಚಿನ ಯುಗ, ನಂತರ ಕೊನೆಯದಾಗಿ ಬಂದದ್ದು ಕಬ್ಬಿಣ ಯುಗ. ಈ ಒಂದೊಂದು ಯುಗದಲ್ಲೂ ಅತ್ಯಧಿಕವಾಗಿ ಬಳಕೆಯಾದ ವಸ್ತುವಿನ ಮೇಲೇನೆ ಆ ಯುಗದ ಹೆಸರಿಟ್ಟಿರೋದು ಅಂತ ತಿಳಿದು ಬರುತ್ತೆ. ಹಾಗಾದ್ರೆ ಈಗ ಎಲ್ಲಕ್ಕಿಂತಲೂ ಜಾಸ್ತಿ ಬಳಕೆಯಾಗೊ ವಸ್ತು ಯಾವುದು ಅಂತ ನಿಮ್ಮ ಅಭಿಪ್ರಾಯ? ನನಗನ್ನಿಸೊ ಮಟ್ಟಿಗೆ ’ಕಾಂಕ್ರೀಟ್’ (concrete) ಅಂತ.
ಈ ಕಾಂಕ್ರೀಟ್ ಯುಗಪುರುಷನ ಪ್ರಭಾವ ಅಷ್ಟಿಷ್ಟಲ್ಲ ಬಿಡಿ. ಮುಟ್ಟಿದ್ದೆಲ್ಲ ಕಾಂಕ್ರೀಟ್, ಕಂಡದ್ದೆಲ್ಲ ಕಾಂಕ್ರೀಟ್, ಇನ್ನೂ ಹೇಳಬೇಕು ಅಂದ್ರೆ ನಮ್ಮ ಕನಸು, ನನಸು, ಆಸೆ, ಆಕಾಂಕ್ಷೆ, ದುಡಿಮೆ, ವ್ಯವಹಾರ ಎಲ್ಲವೂ ಕಾಂಕ್ರೀಟ್. ಕಾಂಕ್ರೀಟ್ ವ್ಯಾಮೋಹ ನಮ್ಮವರಿಂದಲೇ ನಮ್ಮನ್ನು ದೂರಮಾಡಿದೆ, ಅದೆಷ್ಟೋ ಮನಸ್ಸುಗಳ ಮಧ್ಯ ಗೋಡೆ ಹುಟ್ಕೊಂಡು, ಭಾವನೆಗಳಿಗೆ ಗಾಳಿ ಸಿಗದೆ ಉಸಿರು ಕಟ್ಟಿ ಹೋಗೊ ಸ್ಥಿತಿಗೆ ತಂದಿದೆ.
ಇಂದು ನೀವು ಯಾವುದೇ ಪದವೀಧರರನ್ನ ಕೇಳಿ ನಿಮ್ಮ ಜೀವನದ ಗುರಿ ಏನು ಅಂತ, ಸರಿ ಸುಮಾರು ಜನರಿಂದ ಸಿಗೋ ಉತ್ತರ "ಹೆಂಡತಿ, ಮಕ್ಕಳು, ಮನೆ" ಅಂತ. ಸರಿ ಇದು ಮೂಲಭೂತ, ಹೌದು. ಆದ್ರೆ ಇದು ಜೀವನದ ಗುರಿಯಾಗಬೇಕೆ? ಈ ತರಹ ಆಗೋದು ಯಾವಾಗ ಅಂದ್ರೆ ನಾವು ನಮ್ಮ ದುಡಿಮೆ ಮತ್ತು ದಕ್ಷತೆಗಿಂತಲೂ ಎರಡು ಮೂರು ಪಟ್ಟು ಹೆಚ್ಚಿನದ್ದನ್ನ ಆಸೆ ಪಟ್ಟಾಗ. ಕಾಂಕ್ರೀಟ್ ಜಂಗಲ್‌ನ/ಅರಣ್ಯದ ಯಾವುದೋ ಮೂಲೇಲಿ ಒಂದು ಗೋರಿ (ಮನೆ) ಕಟ್ಟಿ / ತಗೊಂಡು ಜೀವನ ಇರೋವರೆಗು ಸರ್ಕಸ್ ಮಾಡ್ಕೊಂಡು, ಅದನ್ನ ತಮ್ಮ ಹೆಸರಿಗೆ ಮಾಡಿಕೊಳ್ಳೊದ್ರಲ್ಲೆ ಮುಗಿದು ಹೋಗಿ ಬಿಡುತ್ತೆ ಎಷ್ಟೋ ಜನರ ಜೀವನ.
ಆದಿನ್ನೆಷ್ಟೋ ಜನರು, 3-ಬೆಡ್‌ರೂಮು, 4-ಬೆಡ್‌ರೂಮು ಮನೆ ತಗೊಳ್ಳೋಕೆ ಅಂತಲೇ ತಮ್ಮ ವೃತ್ತಿ ಜೀವನದ ಅರ್ಧ ಭಾಗವನ್ನ ಮನೆಯವರಿಂದ ದೂರ ಅದೆಲ್ಲೋ ಬೇರೆ ದೇಶದಲ್ಲಿದ್ದು ದುಡಿದು ತರಕ್ಕೆ ಹೋಗ್ತಾರೆ. ಇದೆಲ್ಲದ್ದಕ್ಕೂ ಕೇಂದ್ರ ಆ ಎಕ್ಸ್‌ಟ್ರಾ 10*10(100 sqf)ಗಳು. ಕಲ್ಲು ದೇವರನ್ನ ಪುಜಿಸ್ತಾ ಜನರೂ ಕಲ್ಲಾಗಿ ಬಿಟ್ರಾ? ಮನಸ್ಸಿಗೂ ಕಾಂಕ್ರೀಟ್ ಮಾಡಿಬಿಟ್ರಾ? ಅಂತ ಮನಸ್ಸು ಒಳಗೊಳಗೆ ಕೊರಗುತ್ತೆ. ಅದಕ್ಕೆ ನಮಗೆ ಆಗಾಗ "ಇದು ಕಾಂಕ್ರೀಟ್ ಯುಗಾನಾ?" ಅನ್ನೋ ಪ್ರಶ್ನೆ ಕಾಡುತ್ತೆ.
ಇಂದಿನ ಜಗತ್ತಲ್ಲಿ ಜನರ ವ್ಯವಹಾರ, ಅವರ ನಡೆ, ನುಡಿ, ನೋಡಿದ್ರೆ, ಎಲ್ಲವನ್ನೂ ಒಂದೇಸಾರಿ, ಈಗಿಂದಿಗಲೇ ಪಡೆದುಕೊಳ್ಳಬೇಕೆನ್ನೊ ಅವರ ಚಡಪಡಿಕೆಯ ಜೀವನ ಶೈಲಿ ಗಮನಿಸಿದಾಗ ಯಾರಿಗಾದ್ರು "ಇದು ವೇಗದ (speed) / ಸ್ಪರ್ಧಾತ್ಮಕ (competition) ಯುಗಾ ನಾ?" ಅನ್ನಿಸ್ದೆ ಇರದು. ಹುಟ್ಟಿದಾಗಿಂದ ಸಾಯೋವರೆಗೂ ಯಾವಾಗ್ಲೂ ಬರಿ ಬಡಿದಾಟ. ಎಲ್ಲಿ ಸ್ವಲ್ಪ ತಡವಾದ್ರೂ ಜೀವನವೇ ಕೈ ತಪ್ಪಿ ಹೋಗುತ್ತೆ ಅಥವಾ ಜೀವನ ಅರ್ಥ ಕಳೆದುಕೊಳ್ಳುತ್ತೆ ಅನ್ನೊ ಮನಃಸ್ಥಿತಿ ನಮ್ಮದು. ನಮಗೆ ಸಾಧಿಸಕ್ಕಾಗದ್ದು, ಕೈಗೆಟಕದ್ದು ಬೇರೆಯವರಿಗೆ ಸಿಕ್ಕಿಬಿಟ್ರಂತೂ ಆಯಿತು. ಮನಸ್ಸು ಪೂರ್ತಿಯಾಗಿ ಖಿನ್ನತೆಗೆ (depression-ಗೆ) ತಿರುಗುತ್ತೆ.
ಜೀವನದಲ್ಲಿ ಆಗಾಗ ಸ್ಪರ್ಧೆಗಳಿರುತ್ತೆ ಅವನ್ನ ಧೈರ್ಯ ಮತ್ತು ಯುಕ್ತಿ ಇಂದ ಎದುರಿಸಿ ಗೆಲ್ಲಬೇಕು ನಿಜ, ಆದ್ರೆ ಅದರ ಬದಲು ಜೀವನವನ್ನೆ ಸ್ಪರ್ಧಾ ಕಣವಾಗಿಸಿಬಿಟ್ರೆ ನೆಮ್ಮದಿ ಎಲ್ಲಿಂದ ಬರುತ್ತೆ, ಆರೋಗ್ಯ ಎಲ್ಲಿರುತ್ತೆ?
ಬೇಡಿಕೆಗಿಂತ (demand) ಸರಬರಾಜು (supply) ಕಮ್ಮಿ ಆದಾಗ ಬೆಲೆ ಜಾಸ್ತಿ ಆಗುತ್ತೆ. ಇದು ಸಿಂಪಲ್ ಎಕೊನೊಮಿಕ್ಸ್ ಸಿಧಾಂತ (simple economic theory). ಈ ರೀತಿ ಉನ್ನತ ಶಿಕ್ಷಣದ ಕೆಲವು ಕೋರ್ಸ್‌ಗಳಿಗೆ ಸೀಟುಗಳು ಕಮ್ಮಿ ಇರಬೇಕಾದ್ರೆ ಟೆಸ್ಟ್ ಇಟ್ಟು ಅದರ ಫಲಿತಾಂಶದ ಮೇಲೆ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚತಾರೆ. ಈ ಸಂದರ್ಭದಲ್ಲಿ ಸ್ಪರ್ಧೆ ಸರಿ ಎನಿಸುತ್ತೆ ಮತ್ತು ಸೂಕ್ತವೂ ಹೌದು.
ಆದ್ರೆ ಈ ತರಹದ ಹತ್ತು ಹಲವು ಸ್ಪರ್ಧೆಗಳನ್ನ ಜನ ಅನಾವಷ್ಯಕವಾಗಿ ತಮ್ಮ ಸುತ್ಲು ತಾವೇ ಸೃಷ್ಟಿಸಿಕೊಂಡು ಜೀವನವಿಡಿ ಕಟ್ಕೊಂಡು ಸುತ್ತತಾರೆ. ಉದಾಹರಣೆಗೆ, ನಮಗೊಂದು ಕಾರು ಬೇಕು. ಕಾರು ಕಂಪನಿಗಳು ನಮ್ಮ ದೇಶದಲ್ಲಿ ಸುಮಾರಿದೆ, ನಾಮಗೆ ಕಾರು ಬೇಕು ಅಂತ ಗೊತ್ತಾದ್ರೆ ಸಾಕು, ಬ್ಯಾಂಕುಗಳು, ಕಾರು ಕಂಪನಿಗಳು ಮನೆ ಮುಂದೆ ಬರುತ್ವೆ. ಹಾಗಿದ್ರೆ ಇಲ್ಲಿ ಸ್ಪರ್ಧೆಗೆ ಯಾವುದೆ ಜಾಗವಿಲ್ಲ. ಆದ್ರೆ ನಾವು, ನಮ್ಮ ಸಂಬಂಧಿಕರಿಗಿಂತ ಮೊದಲು ಕಾರು ತಗೋ ಬೇಕು, ಅವರಿಗಿಂತಲೂ ದೊಡ್ಡ ಕಾರು ತಗೋ ಬೇಕು, ಅದನ್ನ ಈಗಲೇ ತಗೋ ಬೇಕು ಅನ್ನೊ ಹತ್ತಾರು ಮನಃಸ್ಥಿತಿಗಳನ್ನ ಸೃಷ್ಟಿಸ್ಕೊಂಡು ನಮ್ಮ ಮುಂದೆ ಇಟ್ಕೊಳ್ಳತೀವಿ. ಇದುವೇ ನಮ್ಮಲ್ಲಿ ಸ್ಪರ್ಧೆ ಮೂಡಿಸುತ್ತೆ. ಇವು ಒಂದು ಆಸೆಯ ಪೂರ್ತಿಗೆ ಮಾತ್ರ ಸೀಮಿತವಾಗಿರದೆ ಒಂದಾದ ಮೇಲೊಂದರಂತೆ ಹುಟ್ಕೊಳ್ತಾನೆ ಇರುತ್ವೆ. ಕೊನೆಗೊಂದು ಸಾರಿ ಜೀವನ ಸೋಲುತ್ತೆ ಆದ್ರೆ ಆಸೆ ಸೋಲಲ್ಲಾ. ತಮಾಷೆಗೆ ಕೇಳ್ತಾ ಇದಿನಿ, ಇದನ್ನೆಲ್ಲ ಯೋಚಿಸ್ತಾ ಇದ್ರೆ ನಿಮ್ಹಾನ್ಸ್ (NIMHANS) ರೋಗಿಗಳಿಗೂ ನಮಗೂ ವ್ಯತ್ಯಾಸ ಬರೀ ಆವರಣದ್ದು (compound-ನದ್ದು) ಮಾತ್ರ ಅನ್ಸುತ್ತೆ, ಎನಂತೀರಾ?
ಈಗಾಗಲೇ 60/kmh ಓಡೋ ಮನಸ್ಸಿಗೆ, ವಸ್ತುಗಳು ಹೇರಳವಾಗಿದ್ರೂ, ಯೋಗ್ಯತೆಗಿಂತ ಹೆಚ್ಚು-ಹೆಚ್ಚಿನದ್ದನ್ನ ಬಯಸೊ ಆಸೆಗಳು, ಇಂದೇ-ಈಗಲೇ ಯ ಒತ್ತಡಗಳು 120/kmh ವೇಗ ಕೊಡುತ್ವೆ. ಆತಿಯಾದ ವೇಗದಿಂದ ಕೊನೆಗೆನಾಗುತ್ತೆ ಅನ್ನೊದು ನಮಗೆಲ್ಲರಿಗು ಗೊತ್ತು. ಆದ್ರು ಓಡ್ತಿವಿ, ವಸ್ತುಗಳನ್ನ ಸಂಗ್ರಹಿಸ್ತಿವಿ, ಆಡಂಬರಾನ ಜೀವನ ಸಾಧನೆ ಅಂದ್ಕೊಂಡು ಬೀಗ್ತಿವಿ. ಅದಕ್ಕೇ "ಇದು ವೇಗದ/ಸ್ವ-ಸ್ಪರ್ಧಾತ್ಮಕ ಯುಗಾನಾ?" ಅನ್ಸುತ್ತೆ.
ಇವತ್ತಿನ ದಿನಪತ್ರಿಕೆ, ಸುದ್ದಿ ಸಮಚಾರಗಳನ್ನ ಕೇಳಿದಾಗ, ನೋಡಿದಾಗ ಅದರಲ್ಲಿ ರಾರಾಜಿಸೋದು ಬರೀ ಭ್ರಷ್ಟಾಚಾರ, ಸುಲಿಗೆ, ವಂಚನೆಗಳೆ. ಅದಕ್ಕೆ ಇದು ಬರೀ ಭ್ರಷ್ಟಾಚಾರದ / ಹಗರಣಗಳ ಯುಗಾನಾ ಅಂತ? 21ನೇ ಶತಮಾನದ ಮೊದಲ ದಶಕವಂತು ಅದಕ್ಕೆ ಸೈ ಅಂತ ಹೇಳುತ್ಲೆ ಕೊನೆ ಉಸಿರೆಳೆಯಿತು.
ನಮ್ಮ ದೇಶದ ಇಂದಿನ ಬೆಳವಣಿಗೆಯ ಮಾಪಕ ಯೇನು ಗೊತ್ತಾ? ಸಾಚಾ ಆಗಿದ್ದ ಅದೆಷ್ಟೋ ಜನ ಭ್ರಷ್ಟಾಚರದ LKG / UKG ಗೆ ಸೇರಿದ್ದಾರೆ, ಬರೀ ಭ್ರಷ್ಟಾಚಾರಕ್ಕೆ ಹೆಸರಾದವರೆಲ್ರೂ ನಮ್ಮ ನಿಮ್ಮ ಸಹಾಯದಿಂದ ಹಗರಣಗಳ ಪದವಿ ಪಡೆದುಕೊಂಡಿದಾರೆ. ಇನ್ನೂ ಹಲವರು ಹೆಚ್ಚಿನ ವ್ಯಾಸಾಂಗಕ್ಕೆ ಅಂತ ವಿದೇಶಕ್ಕೆ ಹೋಗಿ ಸ್ವಿಸ್ ಪದವಿ ಕೂಡ ಗರಿಗೇರಿಸಿದ್ದಾರೆ. ಈ ವ್ಯವಸ್ಥೆಲಿ ನಮ್ಮ ನಿಮ್ಮ ಪಾತ್ರ, ಕೆಲವೊಮ್ಮೆ ಶಿಕ್ಷಕರದ್ದು (ನಾವೇ ಭ್ರಷ್ಟಾಚಾರವನ್ನ ಹುಟ್ಟು ಹಾಕೊದು) / ಇನ್ನ ಕೆಲವೊಮ್ಮೆ ವಿದ್ಯಾರ್ಥಿಗಳದ್ದು (ನಾವು ಭ್ರಷ್ಟಾಚಾರಕ್ಕೆ ಬಲಿಯಾಗೋದು ಮತ್ತು ಅದನ್ನ ಕಲಿತುಕೊಳ್ಳೊದು).
ನಾನೊಂದು ಸಾರಿ ಅದೆಲ್ಲೋ ಓದಿದ ನೆನಪು. ಹಿಂದಿನ ಕಾಲದಲ್ಲಿ, ಯುರೋಪಿನಲ್ಲಿ ಹವಾಮಾನ ವೈಪರಿತ್ಯದ ಕಾರಣ ಕೃಷಿಗೆ ಅನುಕೂಲವಾಗಿರಲಿಲ್ಲ. ಆಗ ಜನರು ಮೂಲತಹವಾಗಿ ಅವಲಂಭಿಸಿದ್ದು ವ್ಯಾಪಾರಿ ಹಡುಗುಗಳ ಲೂಟಿ ಮಾಡಿದ ಸಂಪತ್ತಿನ ಮೇಲೆ ಯಂತೆ. ಆದ್ರೆ ಎರಡು ಬಣಗಳು ಕೆಲವೊಮ್ಮೆ ಒಂದೇ ಹಡಗನ್ನ ಲೂಟಿಮಾಡಿ ಕಿತ್ತಡ್ತಾ ಇದ್ವಂತೆ. ಅದರ ಫಿರ್ಯಾದೆ ತಗೊಂಡು ಪೋಪರ ಹತ್ತಿರ ಹೋದ್ರೆ ಅವರು ಸಮುದ್ರವನ್ನ ಹಲವು ಭಾಗಮಾಡಿ ಒಂದೊಂದು ಭಾಗವನ್ನ ಒಂದೊಂದು ಬಣಕ್ಕೆ/ಗುಂಪಿಗೆ ದತ್ತು ಕೊಟ್ಟು ಆ ಭಾಗದಲ್ಲಿ ಲೂಟಿಯಾದ ಜಹಾಜಿನ ಸಂಪತ್ತು ಆ ಭಾಗದ ಓಡೆತನ ಹೊತ್ತ ಬಣದ್ದು ಅಂತ ಹಂಚಿ ಕೊಡುತ್ತಿದ್ರಂತೆ.
ಅದೇ ತರಹ ನಮ್ಮ ಇಂದಿನ ಸರಕಾರದ ಖಾತೆಗಳ ಹಂಚಿಕೆ ಕೂಡ ಅಂತ ಅನ್ಸಲ್ವಾ? ಆಯಾ ಖಾತೆಗೆ / ಇಲಾಖೆಗೆ ತಕ್ಕಂತೆ ಐದು ವರ್ಷ ಲೂಟಿಗೆ ಗುತ್ತಿಗೆ ವಾರಸುದಾರರು ಹುಡುಕಿ ವಹಿಸಿ ಕೊಟ್ಟ ಹಾಗಿದೆ. ಭಾರತದ ಅಖಂಡತೆ ಇನ್ನು ಗೋಡೆಲಿ ನೇತಾಡೋ ನಕ್ಷೆಗೆ ಮಾತ್ರ ಸಿಮಿತ, ವಾಸ್ತವದಲ್ಲಿ ಕೆಲಸಕ್ಕೆ ಬಾರದ ಜಮೀನು ಮಾತ್ರ ಭರತವಾಗಿ ಉಳಿದಿದೆ, ಉಳಿದದ್ದೆಲ್ಲಾ ಪರಕೀಯವೇ.
ಅದಕ್ಕೇ "ಇದು ಹಗರಣಗಳ ಯುಗಾನಾ?" ಅನ್ಸುತ್ತೆ. ಏನಿಲ್ಲಾ ಆಂದ್ರೂ ಭಾರತದ ವಿಷಯದಲ್ಲಂತು ಇದು ನಿಜ ಅನ್ಸುತ್ತೆ.
ಕೆಲವೊಮ್ಮೆ ಇದೇ ದಿನಪತ್ರಿಕೆಗಳನ್ನ ನೋಡಿದ್ರೆ ಅದರಲ್ಲಿ ಕಾಣ್ಸೋದು ಬರೀ ಆತಂಕ, ಭಯೋತ್ಪಾದನೆ, ನರಹಂತಕ ಕೃತ್ಯಗಳ ವಿಷಯ. ಪ್ರತಿ ದಿನವೂ ಭಯ, ಆತಂಕದಲ್ಲಿ ಜೀವಿಸುವ ಹಾಗಿರುವ ಇಂದಿನ ವಾತಾವರಣ ಗಮನಿಸಿದ್ರೆ "ಇದು ಆತಂಕದ ಯುಗವೇ?" ಅಂತ ಅನ್ನಿಸ್ದೆ ಇರದು. ನನಗಂತು ರಕ್ತಬೀಜಾಸುರನ ರಕ್ತದ ಹನಿಗಳು ಮತ್ತೆ ಭುಮಿಯ ಮೇಲೆ ಬೀಳ್ತಾ ಇವೆ ಮತ್ತು ಆ ಹನಿಗಳೇ ಈ ಉಗ್ರವಾದವಾಗಿ / ಉಗ್ರವಾದಿಗಳಾಗಿ ಜಗತ್ತಿಗೆ ಕಾಡ್ತಾ ಇದೆ / ಇದಾರೆ ಅನ್ನಿಸ್ತಿದೆ.
ಒಂದು ಕಡೆ ಭಯೋತ್ಪಾದನೆಯ ಆತಂಕದಲ್ಲಿ ಜೀವ ಹೀಡಿದು ಬದುಕೊ ಸ್ಥಿತಿ, ಇನ್ನೊಂದು ಕಡೆ ಸ್ಥಿಮಿತ ಕಳೆದುಕೊಂಡ ಭುಮಿಯ ಹವಾಮಾನದ ಚಿತ್ರ-ವಿಚಿತ್ರ ನಡವಳಿಕೆಯ ಆತಂಕ. ಇನ್ನು ದೇವರ ಹೆಸರಲ್ಲಿ / ಪ್ರಭುತ್ವದ ಹೆಸರಲ್ಲಿ / ಸಾಮ್ಯತ್ವದ ಹೆಸರಲ್ಲಿ ನೊಡೆಯೊ ಈ ಭಯೋತ್ಪಾದನೆಯ / ಗೂಂಡಾಗಿರಿಯ ಕೃತ್ಯಗಳು ಜನರ ಪ್ರಾಣ ಕಂಟಕಗಳಾಗಿವೆ. ಈ ಎಲ್ಲಾ ಆತಂಕ, ಭಯ, ಭಯೋತ್ಪಾದನೆಯ ಒತ್ತಡಗಳ ಮಧ್ಯ ಬದುಕಿನ ಬಾಡಿದಾಟ ನೋಡಿದ್ರೆ "ಇದು ಆತಂಕದ / ಗೂಂಡಾಗಿರಿಯ ಯುಗವೇ?" ಅನ್ಸುತ್ತೆ.
ಒಂದು ಕಾಲದಲ್ಲಿ ಪ್ರೇಮಿಗಳು ತಮ್ಮ ಪ್ರೇಯಸಿಗೆ "ನಿನಗೆ ನಾನು ಚಂದ್ರ ತಾರೆಗಳನ್ನ ತಂದು ಕೊಡ್ತೇನೆ, ನಾನು ನಿನ್ನ ಅಂಗೈಲಿ ಇಡೀ ಜಗತ್ತಿನ ಖುಷಿನ ತಂದು ಸುರಿತೇನೆ" ಅಂತೆಲ್ಲಾ ಹೇಳಿ ಹಾಗೇ ರೈಲು ಹತ್ಸಿ ಮದುವೆಯಾಗಿ ಬಿಡೋರು. ಆದ್ರೆ ಈಗ ಒಂದು ಮೊಬೈಲ್‌ನಲ್ಲೆ ಅರ್ಧ ಜಗತ್ತು ಸೇರಿಕೊಂಡಿರೊದನ್ನ ನೋಡಿದ್ರೆ ಆ ಸೂರ್ಯ, ಚಂದ್ರ, ತಾರೆಯರನ್ನೂ ನಮ್ಮ ವಿಙ್ನಾನಿಗಳು ಕೈಗೆ ತಂದು ಸುರೀತಾರೆ ಅನ್ಸುತ್ತೆ. ಭೌತಿಕವಾಗಿ ದೂರವಾಗಿದ್ರೂ ಟೆಕ್ನೊಲೊಜಿಕಲ್ ಆಗಿ / ತಾಂತ್ರಿಕವಾಗಿ ಜಗತ್ತು ತುಂಬಾ ಹತ್ತಿರವಾಗಿದೆ.
ಪಕ್ಕದ ಸೀಟು / ಪಕ್ಕದ ಕ್ಯಾಬೀನು / ಪಕ್ಕದ ಮನೆ / ಪಕ್ಕದ ಕುಟುಂಬ ವ್ಯವಸ್ಥೆ ಹಾಳಾದ್ರೂ ಸರಿ, ಆದ್ರೆ ಯಾಹೂ (yahoo)! ನಲ್ಲಿ ’ಹಾಯ್’ ಹೇಳಿ, gmail ನಲ್ಲಿ ಮಿಂಚಂಚೆ (e-mail) ಕಳ್ಸಿ, ಅರ್ಕುಟ್ (Orkut)ನಲ್ಲಿ ನೆನಪಿಸ್ಕೊಂಡು, ಫ಼ೇಸ್‌ಬುಕ್ (facebook) ನಲ್ಲಿ ಮುಖ ತೋರ್ಸಿ, ಮೊಬೈಲ್ ನಲ್ಲಿ ಮಾತಾಡಿ, 3G ನಲ್ಲಿ ಅಂಜನ ಹಿಡಿದು, ತಂತ್ರಙ್ನಾನದಿಂದ ಲೋಕಾನ, ಲೋಕದ ಸಾಮಾಜಿಕ ಸಂಬಂಧಗಳನ್ನ ಬೆರೆಸೊಕೆ ನಡಿತಾ ಇರೊ ಸಾಮಾಜಿಕ ಕಳಕಳಿಯ ಪ್ರಯತ್ನಗಳನ್ನೆಲ್ಲಾ ನೋಡಿದ್ರೆ "ಇದು ತಂತ್ರಙ್ನಾನದ ಯುಗ" ಅಂತ ಯಾರಿಗಾದ್ರು ಅನ್ನಿಸಿಯೇ ಅನ್ಸುತ್ತೆ.
ಆಕಾಶದ ಆಯಸ್ಕಾಂತಕ್ಕೆ / ಆಕರ್ಷಣೆಗೆ ಭುಮಿಯ ಬೆಲೆಗಳೆಲ್ಲ ಮೋಹಿತವಾಗ್ತಿರೋದನ್ನ ನೋಡಿದ್ರೆ, ಊಟಕ್ಕೆ ಮೊದಲು ಉಪ್ಪಿನಕಯಿ ಅಂತಿದ್ದೋರೆಲ್ಲಾ ಬೆಳಿಗ್ಗೆ ಉಪ್ಪಿನಕಾಯಿ ಯಾಕೆ?, ರಾತ್ರಿ ಬರಿ ಉಪ್ಪಿನಕಾಯಿ ಸಾಕು ಅನ್ನೊ ಹಾಗಾಗಿದೆ. ಅದಕ್ಕೆ "ಇದು ದುಬಾರಿ ಯುಗವೇ?" ಅನ್ನಿಸಲ್ವೆ.
ನಾನು ನಾನು ಅಂತ ಮೆರೆದವರೆಲ್ಲಾ, ಒಂದು ಈರುಳ್ಳಿ ಬೆಲೆಗೆ ಕಣ್ಣಿರಿಡ್ತಾ ಇದಾರೆ. ತರಕಾರಿ ತಿನ್ನೋನೆ ಈಗ ಯುವರಾಜ. ನುಗ್ಗೆಕಾಯಿ, ಕುಂಬಳಕಾಯಿ, ಹೀರೆಕಾಯಿ, ಗಜರಿ, ಅಂತ ಇಟ್ಕೊಂಡು ಮಾರೋನೆ ಮಹಾರಾಜ. ಇನ್ನು ಬೆಳ್ಳುಳ್ಳಿ ತಿಂದ್ರೆ ಹೃದಯಾಘಾತ ತಪ್ಪುತ್ತೆ ಆದ್ರೆ ಖರಿದಿಸಿದ್ರೆ E.C.G. ಟೆಸ್ಟ್ ಉಚಿತ. ಹೋಟೆಲ್‌ಗಳಲ್ಲಿ ರೇಟ್ ಬೋರ್ಡಗಳು ಬದಲಾಗಲಿವೆ. ಒಂದು ಇಡ್ಲಿಗೆ - ರೂ. 10, ಒಂದು ವಡೆಗೆ - ರೂ. 20, ತೆಂಗಿನ ಚಟ್ನಿಗೆ - ರೂ. 15, ಟೊಮ್ಯಾಟೊ ಸಾಂಬಾರಗೆ - ರೂ. 25. ಹೀಗೆ ಮುಂದ್ವರಿಯುತ್ತೆ ಈ ಲೀಸ್ಟು. ಅದಕ್ಕೇ ಇದು "ದುಬಾರಿ ಯುಗ ಅಲ್ವಾ?"
ಕೊನೆಗೆ ನಾನು ಈ ಪ್ರಶ್ನೇನ, ಅಂದ್ರೆ "ಇದು ಯಾವ ಯುಗ?" ಅನ್ನೋ ಪ್ರಶ್ನೇನ ನಿಮ್ಮ ವಿವೇಚನೆಗೆ ಬಿಡ್ತಾ ಇದಿನಿ. ಈ ಲೇಖನ ನಿಮಗೆ ಒಂಚೂರು ಹೊತ್ತಾದ್ರು ವಿಚಾರಗಳ ಆಂಗಳಕ್ಕೆ ಕರೆದೊಯ್ದರೆ ನನ್ನ ಪ್ರಯತ್ನ ಸಾರ್ಥಕ ಅಂದ್ಕೋತಿನಿ.
-- ಕಲ್ಯಾಣ ಕುಲ್ಕರ್ಣಿ

No comments:
Post a Comment