ದೇಶದ ಒಂದು ರಾಜಕೀಯ ಪಕ್ಷ ಸ್ವಾತಂತ್ರ್ಯಾ ನಂತರದ ೬೭ ವರ್ಷಗಳಲ್ಲಿ ೬೦ ವರ್ಷ ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ನಮ್ಮ ಮೇಲೆ ಅಧಿಕಾರ ಚಲಾಯಿಸುತ್ತಿದೆ, ಅದರಲ್ಲೂ ದೇಶದ ಒಂದೇ ಕುಟುಂಬದವರು ಕೆಲವು ಗುಲಾಮಿ ವಿಚಾರಧಾರೆಯವರ ಸಹಾಯದಿಂದ ದೇಶವನ್ನು ನಡೆಸುತ್ತಿದ್ದಾರೆ. ದೇಶದ ಸ್ವಾಭಿಮಾನವನ್ನು ಹರಾಜು ಹಾಕುತ್ತಿದ್ದಾರೆ. ಈ ದೇಶವನ್ನು ಜಾತೀಯ ರಾಜಕಾರಣದ ದಳ್ಳುರಿಗೆ ತಳ್ಳಿ, ತಮ್ಮ ಮನಸ್ಸಿಗೆ ತೋಚಿದ ಹಾಗೆ ಜನಸಾಮಾನ್ಯರನ್ನು ಇಂಧನವಾಗಿಸಿ ಕೊಂಡು ತಮ್ಮ ರೊಟ್ಟಿ ಬೇಯಿಸಿಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕೆ ದೇಶದ ಭವಿಷ್ಯ ಬೂದಿಯಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಂತೂ ಈ ಪಕ್ಷದ ಸರಕಾರ ಪ್ರತಿಯೊಂದು ಕ್ಷೇತ್ರದಲ್ಲೂ ವಿಫ಼ಲವಾಗಿದೆ. ಭೂಮಿಯಿಂದ ಆಕಾಶದವರೆಗೆ ಎಲ್ಲವನ್ನು ಮಾರಿ ನುಂಗಿದ್ದಾಯಿತು. ದೇಶದ ಸ್ವಾಭಿಮಾನ, ದೇಶದ ಯುವಕರ ಜೋಶ, ದೇಶದ ಸಂಪತ್ತು, ದೇಶದ ಸುರಕ್ಷತೆ, ಯುವಕರ ಭವಿಷ್ಯ ಎಲ್ಲವು ರಾಮ್ ಭರೊಸೆ ಅನ್ನೋ ಹಾಗಾಗಿದೆ. ದೇಶದ ಜಲ, ಅರಣ್ಯ, ನೈಸರ್ಗಿಕ ಸಂಪತ್ತು ಎಲ್ಲದರ ಮೇಲೆ ಅಕ್ರಮವಾಗಿ ಏಕಾಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇದನ್ನೆಲ್ಲಾ ಅರಿತು ಇದರಿಂದ ಬೇಸತ್ತು ಜನ ಈ ಪಕ್ಷದ ಕಪಿ ಮುಷ್ಟಿಯಿಂದ ನಮ್ಮ ದೇಶವನ್ನು ಬಿಡಿಸಬೇಕು ಎಂಬ ವಿಚಾರಧಾರೆಯಡಿ ಒಗ್ಗಟ್ಟಿನಿಂದ ಮುನ್ನುಗ್ಗುತ್ತಿರುವಾಗ ಕೆಲವು ಜನ ಹಾಗೂ ಪಕ್ಷಗಳ ಮಾತು ಕೇಳಿದಾಗ ಆಶ್ಚರ್ಯ ಹಾಗೂ ಬೇಜಾರಾಗುತ್ತದೆ. ಆದರೆ ನಮ್ಮಂಥವರ ಬೇಜಾರು ದುಃಖವನ್ನು ಕಂಡು ಅವರಿಗೆ ನಗು ಬರುತ್ತಿದೆ.
ಇಂದು ಭಾರತದಾದ್ಯಂತ ಖಾ-ಅಂಗ್ರೆಜ್ ಮುಕ್ತ ಭಾರತ ಗಾಳಿ ಬಿಸುತ್ತಿರುವಾಗ ಕೆಲವರು ಹೇಳುತ್ತಾರೆ " ಈ ಪಕ್ಷ ಹಾಗೆ ಸುಮ್ಮನೆ ಮೂಲೆಗುಂಪಾಗುವುದಿಲ್ಲ, ಈ ಪಕ್ಷ ತಮ್ಮ ನೀತಿಗಳಿಂದಾಗಿ ಹಾಗೂ ಭ್ರಷ್ಟಾಚಾರದಿಂದಾಗಿ ಇಂದು ಸ್ವಲ್ಪ ಬಲಹೀನವಾಗಿರಬಹುದು ಆದರೆ ಇದು ಮತ್ತೆ ಎದ್ದೇಳುತ್ತದೆ. ಇಂದು ಪಪ್ಪು ನಾ-ಪಾಸ್ ಆಗಿದ್ದಾನೆ, ಅವನು ಇನ್ನು ಮುಂದಿನ ಚುನಾವಣೆಯ ವರೆಗೆ ರಾಜನೀತಿಯ ಒಳ ಮರ್ಮವನ್ನು ಅರಿತು ಬರಬೇಕು. ಆಗ ಅವನು ಸಫ಼ಲನಾಗಿಯೆ ಆಗುತ್ತಾನೆ."
ವಿಪರ್ಯಾಸವೆಂದರೆ ಇಂತಹ ಮಾತುಗಳನ್ನು ಅದಾರೋ ಓದು-ಬರಹ ಅರಿಯದವರು ಆಡುತ್ತಿಲ್ಲ; ಓದು ಬರಹ ಅರಿತ ಮತ್ತು ರಾಜಕೀಯ ಮತ್ತು ಅದರ ಕುನೀರತಿಗಳನ್ನು ಅರಿತವರೆ ಆಡುವ ಮಾತು.
ಆಗ ನನ್ನ ತಲೆಯಲ್ಲಿ ಅನೇಕ ಪ್ರಶ್ನೆಗಳು ಹುಟ್ಟುಹಾಕುತ್ತವೆ. ಆ ಪಕ್ಷ ಭಾರತದ ರಾಜನೀತಿಯಲ್ಲಿ ಮುಂದೆವರೆಯುವುದು ಅಷ್ಟೊಂದು ಅವಶ್ಯಕವೇ? ನಾವು ಯಾವತ್ತಾದರೂ ವಂಶವಾದದ ಪಿಡುಗನ್ನು ದೇಶದ ರಾಜನೀತಿಯಿಂದ ಬೇರ್ಪಡಿಸಬಲ್ಲೇವೆ? ಇವರ ೬೦ ವರ್ಷಗಳ ದೀರ್ಘ ಆಡಳಿತದಲ್ಲಿ ನಾವು ಪಡೆದುಕೊಂಡದ್ದೇನು, ಕಳೆದುಕೊಂಡದ್ದೆಷ್ಟು ಅನ್ನುವುದರ ಪರಿವೆಯಾದರು ನಮಗಿದೆಯೇ? ಈ ಲೂಟಿಯ ಅಂದಾಜು ಆದರು ನಮಗಿದೆಯೇ? ನಾವೇ ಆ ಲೂಟಿಯನ್ನ ಮರೆಯಲು ಪ್ರಯತ್ನಿಸುತ್ತಿದ್ದೆವೆಯೇ? ಕಳೆದ ೬೦ ವರ್ಷಗಳ ಸಮಯ ಹಾಗೂ ಲೂಟಿಯಾದ ಸಂಪತ್ತು ನಮ್ಮ ಬಳಿ ಇದ್ದಿದ್ದರೆ ನಾವು ಏನೆಲ್ಲಾ ಮಾಡಬಹುದಿತ್ತು ಅನ್ನುವ ಅರಿವು ನಮಗಿದೆಯೇ?
೧೨೫ ಕೋಟಿ ಜನಸಖ್ಯೆಯ ಈ ದೇಶದಲ್ಲಿ ನಮಗೆ ಒಂದು, ಎರಡು, ಕೆಲವು (೫೪೫) ಪ್ರಾಮಾಣಿಕ, ರಾಷ್ಟ್ರವಾದಿ, ಪ್ರಗತಿಪರ ಜನರು ಸಿಗುವುದು / ಅವರನ್ನು ಹುಡುಕುವುದು ನಮಗೆ ಕಷ್ಟವಾಯಿತೆ? ನಾವು ಆಗಲೇ ಸೋಲು ಒಪ್ಪಿದ್ದಾಯಿತೆ? ಇದನ್ನ ನಮ್ಮ ಹಣೆ ಬರಹ ಅಥವಾ ದೇಶದ ದುರ್ದಶೆ ಅಂತ ಹೇಳಿ ಇವರಿಂದಲೇ ಶಾಸಿತರಾಗುತ್ತಿರುವುದೇ? ಅಥವಾ ನಮ್ಮ ಗುಲಾಮಿತನದ ಮಾನಸಿಕತೆಯಿಂದ ಆ ಪಕ್ಷ ಹಾಗೂ ಅದರ ಕೇಂದ್ರದಲ್ಲಿರುವ ಕೌಟುಂಬಿಕ ರಾಜಕಾರಣವನ್ನು ಬೇರು ಸಹಿತ ಕಿತ್ತೆಸೆಯುವುದೆ? ಯೋಚಿಸಿ.
ನಮಗೆ ಒಗ್ಗಟ್ಟಿನಿಂದ ಮುನ್ನುಗ್ಗುತ್ತಾ "ಖಾ-ಅಂಗ್ರೇಜ್ ಮುಕ್ತ ಭಾರತವನ್ನು ನನಸಾಗಿಸಬೇಕಿದೆ." ಇಲ್ಲವಾದಲ್ಲಿ ಈ ದೇಶ ಉಳಿಯಲಾರದು ಮತ್ತು ನಾವು ನಮ್ಮದೇ ದೇಶದಲ್ಲಿ ಕೈದಿಗಳಾಗಿ ಬಿಡುವ ಸಾಧ್ಯತೆ ಇದೆ.
-- ಅಭಿನವ ಭಾರತ

No comments:
Post a Comment